LATEST NEWS
ಅಪರೂಪದ ಶಸ್ತ್ರ ಚಿಕಿತ್ಸೆ ಮೂಲಕ ಸಯಾಮಿ ಬೆಕ್ಕುಗಳನ್ನು ಬೇರ್ಪಡಿಸಿದ ಪಶುವೈದ್ಯ
ಮಂಗಳೂರು : ಅಪರೂಪದ ಪ್ರಕರಣವೊಂದರಲ್ಲಿ ಸಯಾಮಿ ಅವಳಿ ಬೆಕ್ಕುಗಳನ್ನು ಪಶುವೈದ್ಯರೋಬ್ಬರು ಶಸ್ತ್ರ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ. ನಗರದ ಅಡ್ಯಾರ್ನಲ್ಲಿರುವ ಪಶು ಚಿಕಿತ್ಸಾಲಯದಲ್ಲಿ ಅಪರೂಪದ ಶಸ್ತ್ರ ಚಿಕಿತ್ಸೆ ನಡೆದಿದೆ.
ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ನಿವಾಸಿಯೊಬ್ಬರು ಸಾಕಿದ ಪರ್ಷಿಯನ್ ತಳಿಯ ಬೆಕ್ಕೊಂದು 5 ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ಅದರಲ್ಲಿ 4 ಬೆಕ್ಕಿನ ಮರಿಗಳು ವಿಶಿಷ್ಟ ಸಯಾಮಿ ಅವಳಿಗಳಾಗಿ ಜನಿಸಿದ್ದವು.
ಬೆಕ್ಕನ್ನು ಪರೀಕ್ಷಿಸಿದ ಅಡ್ಯಾರ್ನ ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಕೆ.ಪ್ರಮೋದ್ ಅವರು, ಇವುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಬೇರ್ಪಡಿಸಲು ನಿರ್ಧರಿಸಿದ್ದಾರೆ. ಮಂಗಳವಾರ ಈ ಸಯಾಮಿ ಬೆಕ್ಕುಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಿ ಯಶಸ್ವಿಯಾಗಿ ಬೇರ್ಪಡಿಸಿ, ವಾರಸುದಾರರಿಗೆ ನೀಡಿದ್ದಾರೆ.
ಇದಕ್ಕೂ ಮೊದಲು ಬೆಕ್ಕು ಸಾಕಿದ ವ್ಯಕ್ತಿ ವಿವಿಧ ಪಶು ಚಿಕಿತ್ಸಾಲಯಕ್ಕೆ ಹೋದರೂ ಬೆಕ್ಕುಗಳು ಬದುಕುಳಿಯುವ ಸಾಧ್ಯತೆ ಇಲ್ಲವೆಂದು ಹೇಳಿದ್ದರು.