Connect with us

    KARNATAKA

    ಸಮರ್ಥನೆ ಸತ್ಯವಾಗಲ್ಲ,ಅರೋಪಗಳು ಸುಳ್ಳೆಂದು ದೇಗುಲದಲ್ಲಿ ಪ್ರಮಾಣ ಮಾಡಲು ಶುಭದಾ ರಾವ್ ಸವಾಲು..!

    ಕಾರ್ಕಳ : ಪರಶುರಾಮನ ಪ್ರತಿಮೆಯ ವಿಚಾರವಾಗಿ ಕಾರ್ಯಕರ್ತರ ಸಭೆಯಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್ ನೀಡಿದ ಹೇಳಿಕೆ ಸಮರ್ಥನೆಯೇ ಹೊರತು ಅದೇ ಸತ್ಯವಲ್ಲ,ಅರೋಪಗಳು ಸುಳ್ಳೆಂದು ದೇಗುಲದಲ್ಲಿ ಪ್ರಮಾಣ ಮಾಡಿ ಸಾಬೀತು ಮಾಡುವಂತೆ ಪುರಸಭಾ ಸದಸ್ಯ ಕಾಂಗ್ರೇಸ್ ವಕ್ತಾರ ಶುಭದಾ ರಾವ್ ಸವಾಲು ಹಾಕಿದ್ದಾರೆ.


    ಮತ್ತೊಂದು ವೀಡಿಯೋ ಬಿಡುಗಡೆ ಮಾಡಿ ಸವಾಲು ಎಸೆದಿರುವ ಶುಭದರಾವ್ ಭಾಷೆಯ ಎಲ್ಲೆ ಮೀರಿ ಆಡಿದ ಅಸಭ್ಯ ಮತ್ತು ಅವಹೇಳನ ಮಾತುಗಳಿಂದ ಏನೂ ಸಾಧಿಸಿದಂತೆ ಆಗುವುದಿಲ್ಲ. ಧರ್ಮದ ದುರ್ಬಳಕೆಯೇ ಭಿಕ್ಷೆ ಬೇಡುವ ಪರಿಸ್ಥಿತಿಗೆ ತರುತ್ತದೆ ಎನ್ನುವುದು ನಿಮ್ಮ ಮಾತಿನಿಂದ ಸಾಬೀತಾಗಿದೆ, ಮಾಡಿದ ಆರೋಪಗಳು ಸುಳ್ಳೆಂದು ದೇಗುಲದಲ್ಲಿ ಪ್ರಮಾಣ ಮಾಡಿ ಸಾಬೀತುಪಡಿಸಿದರೆ ನಾನು ಕ್ಷಮೆ ಕೇಳಿ ರಾಜಕೀಯ ನಿವೃತ್ತಿಯಾಗುತ್ತೇನೆ ಅಂದೇ ನಮ್ಮ ನಡುವಿನ ರಾಜಕೀಯ ಸಂಘರ್ಷ ಕೊನೆಯಾಗಲಿ. ಪ್ರಮಾಣ ಮಾಡವ ಸ್ಥಳ, ಸಮಯ, ದಿನಾಂಕವನ್ನು ನೀವೇ ನಿರ್ಧರಿಸಿ ಎಂದು ಶಾಸಕ ಸುನಿಲ್ ಕುಮಾರ್ ರವರಿಗೆ ಸವಾಲು ಹಾಕಿದ್ದಾರೆ.

    ಬಿಜೆಪಿಯ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಪರಶುರಾಮನ ಪ್ರತಿಮೆ ಬಗ್ಗೆ ಅವರು ನೀಡಿದ ಸಮರ್ಥನೆ ಸುಳ್ಳಿನಿಂದ ಕೂಡಿದೆ, ತನ್ನ ಮೇಲೆ ಬಂದ ಆರೋಪಗಳನ್ನು ಕಾರ್ಯಕರ್ತರ ಸಭೆ ಕರೆದು ಅವರ ಮುಂದೆ ಹೇಳುವ ದುಸ್ತಿತಿ ಅವರಿಗೆ ಬಂದಿರುವುದು ನಮ್ಮ ದುರಂತ ಅವರ ಮೇಲೆ ಮಾಡಿದ ಅರೋಪಗಳಲ್ಲಿ ಒಂದನ್ನು ಸಾಬೀತುಪಡಿಸಲು ಸಾದ್ಯವಾಗಿಲ್ಲ ಎಂದು ಹೇಳಿರುವ ಅವರು ದೇಗುಲದಲ್ಲಿ ಪ್ರಮಾಣಕ್ಕೆ ಬರುವ ಮೂಲಕ ಆರೋಪಗಳೆಲ್ಲವೂ ಸುಳ್ಳೆಂದು ಸಾಬೀತುಪಡಿಸಲು ಒಳ್ಳೆಯ ಅವಕಾಶವಿದೆ ಸವಾಲನ್ನು ಸ್ವೀಕರಿಸಲಿ ಇಲ್ಲವಾದಲ್ಲಿ ತಪ್ಪನ್ನು ಒಪ್ಪಿಕೊಂಡಂತೆ ಎಂದು ಸವಾಲು ಹಾಕಿದ್ದಾರೆ.

    ಥೀಮ್ ಪಾರ್ಕ್ ಸಂಬಂಧಿಸಿದಂತೆ 5 ಪ್ರಶ್ನೆಗಳು
    1) ಈ ವಿಡಿಯೋ ಪ್ರತಿಮೆ ಸ್ಥಾಪನೆಯ ಸಂದರ್ಬದಲ್ಲಿ ಚಿತ್ರೀಕರಣ ಮಾಡಿದ್ದೇ ಅಥವಾ ಪ್ರತಿಮೆ ತೆರವುಗೊಳಿಸುವಾಗ ಚಿತ್ತೀಕರಣ ಮಾಡಿದ್ದೆ?

    2) ಈ ವಿಡಿಯೋದಲ್ಲಿ ದಾಖಲಾಗಿರುವಂತೆ ಕೈನ್ ಮೂಲಕ ಎತ್ತಿದ ಪರಶುರಾಮನ ಎದೆಯ ಮೇಲಿನ ಭಾಗ ಕಂಚಿನದ್ದೇ ?

    3) ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿಯವರು ಉದ್ಘಾಟಿಸಿದ್ದ ಪರಶುರಾಮನ ಪ್ರತಿಮೆ ಸಂಪೂರ್ಣ ಕಂಚಿನದ್ದೇ?

    4) ಪ್ರತಿಮೆಯ ಮೇಲ್ಬಾಗ ತೆರವು ವಿಚಾರವಾಗಿ ಜಿಲ್ಲಾಡಳಿತ, ಪೋಲೀಸ್, ಮತ್ತು ನಿರ್ಮಿತಿ ಕೇಂದ್ರ ಮೇಲೆ ತಾವು ಒತ್ತಡ ಹೇರಲಿಲ್ಲವೇ?

    5) ಕಾಂಗ್ರೇಸ್ ಅನುದಾನ ತಡೆ ಹಿಡಿದಿದೆ ಎಂದ ಹೇಳಿದ ತಮ್ಮ ಆರೋಪ ಸರಿಯೇ?
    ಈ ಎಲ್ಲ ಸವಾಲುಗಳಿಗೆ ತಾವು ದೇಗುಲದಲ್ಲಿ ಪ್ರಮಾಣ ಮಾಡಿ ಸಾಬೀತುಪಡಿಸಬೇಕಾಗಿ ಸವಾಲು ಹಾಕುತ್ತೇನೆ.

    Share Information
    Advertisement
    Click to comment

    You must be logged in to post a comment Login

    Leave a Reply