Connect with us

    FILM

    ಕಮಲ್ ಹಾಸನ್ ಪುತ್ರಿಯ ಖಾಸಗಿ ಪೋಟೋ ವೈರಲ್….!!

    ಮುಂಬೈ ಮಾರ್ಚ್ 29:ಖ್ಯಾತ ನಟಿ ಶ್ರುತಿ ಹಾಸನ್ ಅವರ ಖಾಸಗಿ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮ ಬಾಯ್ ಫ್ರೆಂಡ್ ಜೊತೆಗಿನ ಫೋಟೊ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


    ಇಬ್ಬರೂ ಅರೆನಗ್ನರಂತೆ ಕಾಣುವ ಫೋಟೋವೊಂದನ್ನು ಶೇರ್ ಮಾಡಿರುವ ಶ್ರುತಿ ಹಾಸನ್, ‘ಶಾಂತನು, ನೀನು ನನ್ನ ಲವ್, ನೀನು ನನ್ನ ವಜ್ರ, ನೀನು ನಕ್ಷತ್ರ, ಬೆಳಕು ಎಂತಹ ಸ್ಥಿತಿಯಲ್ಲೂ ನಾನು ನಿನ್ನೊಂದಿಗೆ ಇರುತ್ತೇನೆ’ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಶಾಂತನು ಮೇಲಿನ ಪ್ರೀತಿಯನ್ನು ಅವರು ಈ ಮೂಲಕ ವ್ಯಕ್ತಪಡಿಸಿದ್ದಾರೆ.


    ಶಾಂತನು ಮತ್ತು ಶ್ರುತಿ ಹಾಸನ್ ಹಲವು ವರ್ಷಗಳಿಂದ ಸಹಜೀವನ ನಡೆಸುತ್ತಿರುವುದು ಗುಟ್ಟಿನ ಸಂಗತಿ ಏನೂ ಅಲ್ಲ. ಎರಡೂ ಕುಟುಂಬಗಳ ಒಪ್ಪಿಗೆ ಪಡೆದುಕೊಂಡೇ ಅವರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೇ, ಅನೇಕ ಪ್ರವಾಸಗಳನ್ನು ಒಟ್ಟಿಗೆ ಮಾಡಿದ್ದಾರೆ. ಹಾಗಾಗಿ ಈ ಫೋಟೋಗಳು ಸಹಜ ಎನ್ನುವ ಕಾಮೆಂಟ್ ಕೂಡ ಹರಿದಾಡುತ್ತಿವೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *