Connect with us

KARNATAKA

ಶೃಂಗೇರಿ ಶ್ರೀ ಶಾರದಾ ಪೀಠದಿಂದ ಮೃತ್ತಿಕೆ ಹಸ್ತಾಂತರ

ಶೃಂಗೇರಿ ಅಗಸ್ಟ್ 3: ಅಯೋಧ್ಯೆಯಲ್ಲಿ ಟ್ರಸ್ಟ್ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಅಯೋಧ್ಯೆ ಶ್ರೀರಾಮ ಮಂದಿರದ ಭೂಮಿ ಪೂಜೆ  ಆಗಸ್ಟ್ 5 ರಂದು  ಪ್ರಧಾನಮಂತ್ರಿ ನರೇಂದ್ರ ಮೋದಿ ನೆರವೇರಿಸಲಿದ್ದು ದೇಶದ ವಿವಿಧ ಪುಣ್ಯ ಸ್ಥಳಗಳಿಂದ ಹಾಗೂ ಪುಣ್ಯ ನದಿಗಳಿಂದ ಮೃತ್ತಿಕೆ ಮತ್ತು ಜಲ ಸಂಗ್ರಹಿಸಲಾಗುತ್ತಿದೆ.

ಈ ಹಿನ್ನಲೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಶೃಂಗೇರಿ ಶ್ರೀ ಶಾರದಾ ಪೀಠವನ್ನು ಸಹ ವಿನಂತಿಸಿಕೊಂಡಿದ್ದು ಜಗದ್ಗುರು ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮೀಜಿಗಳು ಹಾಗೂ ಕರಕಮಲ ಸಂಜಾತ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಗಳು ತಮ್ಮಪರಿಪೂರ್ಣ ಆಶೀರ್ವಾದಗಳೊಂದಿಗೆ ಕಾರ್ಯಕರ್ತರಿಗೆ ಮೃತ್ತಿಕೆ ಮತ್ತುಪುಣ್ಯ ತೀರ್ಥವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಭಜರಂಗದಳ ಜಿಲ್ಲಾ ಸಂಚಾಲಕ ಶಶಾಂಕ್ , ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೆ ಶ್ರೀಕಾಂತ್ ಮ್ಯಾಮ್ಕೋಸ್ ನಿರ್ದೇಶಕ ಟಿ ಕೆ ಪರಾಶರ ,ಪತ್ರಕರ್ತ ಶೃಂಗೇರಿ ಸುಬ್ಬಣ್ಣ ,ಜಿಲ್ಲಾ ಗೋರಕ್ಷ ಪ್ರಮುಖ್ ಅರ್ಜುನ್ ಮತ್ತು ಅಭಿಷೇಕ್ ಗಡಿಗೇಶ್ವರ ಹಾಜರಿದ್ದರು

Facebook Comments

comments