Connect with us

LATEST NEWS

ಇತಿಹಾಸ ಪ್ರಸಿದ್ಧ ಶ್ರೀ ವಿಠೋಭ ರಕುಮಾಯಿ ಭಜನಾ ಸಪ್ತಾಹ ಸಮಾಪನ

ಇತಿಹಾಸ ಪ್ರಸಿದ್ಧ ಶ್ರೀ ವಿಠೋಭ ರಕುಮಾಯಿ ಭಜನಾ ಸಪ್ತಾಹ ಸಮಾಪನ

ಮಂಗಳೂರು ನವೆಂಬರ್ 20: ಇತಿಹಾಸ ಪ್ರಸಿದ್ಧ ಶ್ರೀ ವಿಠೋಭ ರಕುಮಾಯಿ ದೇವಸ್ಥಾನದಲ್ಲಿ 7 ದಿನಗಳ ಪರ್ಯಂತ ನಿರಂತರ ನಡೆಯುತಿದ್ದ ” ಅಖಂಡ ಭಜನಾ ಸಪ್ತಾಹ ” ವು ಕಾರ್ತಿಕ ಏಕಾದಶಿಯ ಪರ್ವ ದಿನದಂದು ಸಮಾಪನ ಗೊಂಡಿತು .

ಪ್ರಾತಃ ಕಾಲ ಶ್ರೀ ದೇವರಿಗೆ ಪಂಚಾಮೃತ , ಪುಳಕಾಭಿಷೇಕಗಳು ವೈದಿಕ ವಿಧಿ ವಿಧಾನಗಳೊಂದಿಗೆ ಪ್ರಾರಂಭಗೊಂಡು ಮಧ್ಯಾಹ್ನ ವಿಶೇಷ ಅಲಂಕಾರದೊಂದಿಗೆ ಮಹಾ ಮಂಗಳಾರತಿ ಏಕಾದಶಿ ಪ್ರಯುಕ್ತ ನೆರೆದ ಭಗವತ್ ಭಕ್ತರಿಗೆ ಫಲಾಹಾರ ಸೇವೆ ಸಾಯಂಕಾಲ ರಥ ಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಳದಿಂದ ” ಹುಲ್ಪೋ” ಹೊರೆ ಕಾಣಿಕೆ ಮೆರವಣಿಗೆ ನಡೆಯಿತು.

ರಾತ್ರಿ ಖ್ಯಾತ ಗಾಯಕರಾದ ಪುತ್ತೂರು ನರಸಿಂಹ ನಾಯಕರಿಂದ ಭಜನಾ ಸಂಕೀರ್ತನೆ ಬಳಿಕ ರಾತ್ರಿ ಮಹಾ ಪೂಜೆ ನಡೆಯಿತು .
ಸಾವಿರಾರು ಭಜಕರು ಪಾಲ್ಗೊಂಡರು . ಶ್ರೀ ದೇವಳದ ಮೊಕ್ತೇಸರರಾದ ಜಿ . ಹನುಮಂತ ಕಾಮತ್ , ಮರೋಳಿ ಸುರೇಂದ್ರ ಕಾಮತ್ , ಮೋಹನ್ ವಿ ಕಾಮತ್ , ಯು . ವಿಶ್ವನಾಥ ನಾಯಕ್ ಉಪಸ್ಥಿತರಿದ್ದರು .

VIDEO

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *