Connect with us

    KARNATAKA

    ಶ್ರೀ ಗೋಕರ್ಣ ಪರ್ತಗಾಳಿ ಮಠಾಧೀಶರ ಸಂಭ್ರಮದ ದಿಗ್ವಿಜಯ ಮಹೋತ್ಸವ

    ಬೆಂಗಳೂರು : ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಗುರು ಪೀಠಗಳಲ್ಲೊಂದಾದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 24ನೇ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೆಯರ್ ಸ್ವಾಮೀಜಿಯವರು ಕ್ರೋಧಿ ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತವನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ದ್ವಾರಕನಾಥ ಭವನದಲ್ಲಿ ನೆರವೇರಿಸಿದರು.

    18 ಸೆಪ್ಟೆಂಬರ್ 2024 ಬುಧವಾರದಂದು ತಮ್ಮ ಚಾತುರ್ಮಾಸ್ಯ ವ್ರತವನ್ನು ಮೃತಿಕ ವಿಸರ್ಜನೆಯ ಮುಖೇನ ಸಂಪನ್ನಗೊಳಿಸಿದರು. ಈ ಪ್ರಯುಕ್ತ ಬೆಂಗಳೂರಿನ ನೆಟ್ಕಲಪ್ಪ ಸರ್ಕಲ್, ದ್ವಾರಕನಾಥ ಭವನ ಬಸವನಗುಡಿಯಲ್ಲಿ ಸೆಪ್ಟೆಂಬರ್ 28 ಮತ್ತು 29 ರಂದು ವಿಶೇಷ ಕಾರ್ಯಕ್ರಮಗಳು ಜರಾಗಿತು. 28 ರಂದು ಬೆಳಿಗ್ಗೆ ಗೋವಾದ ಶ್ರೀ ಪರ್ತಗಾಳಿ ಜೀವೋತ್ತಮ ಮಠದಲ್ಲಿ 27 ನವೆಂಬರ್ 2025 ರಿಂದ 7 ಡಿಸೆಂಬರ್ 2025 ರವರಿಗೆ ನಡೆಯಲಿರುವ ಮಠದ 550 ವರ್ಷದ ಮಹೋತ್ಸವದ ಸಮಯದಲ್ಲಿ ಸ್ಥಾಪಿಸಲಿರುವ 77 ಅಡಿ ಬೃಹತ್ ಶ್ರೀ ರಾಮಚಂದ್ರ ದೇವರ ಕಂಚಿನ ಪ್ರತಿಮೆಯ ಪ್ರತಿ ಕೃತಿಯನ್ನು ಪರಮಪೂಜ್ಯ ಸ್ವಾಮೀಜಿಯವರು ಅನಾವರಣಗೊಳಿಸಿದರು. ಇದೇ ವೇಳೆ ಪರಮಪೂಜ್ಯ ಸ್ವಾಮೀಜಿಯವರ ಸಮ್ಮುಖದಲ್ಲಿ ಬೃಹತ್ ಶ್ರೀ ರಾಮ ನಾಮ ಜಪ ಅಭಿಯಾನವು ಸುಮಾರು 3000ಕೂ ಅಧಿಕ ಜಾಪಕರಿಂದ, 39,06,575 ಶ್ರೀ ರಾಮ ನಾಮ ತಾರಕ ಮಂತ್ರದ ಜಪವು 2 ಗಂಟೆಗಳ ಅವಧಿಯಲ್ಲಿ ನಡೆಯಿತು. ಬಳಿಕ ಸಂಜೆ ಪರಮಪೂಜ್ಯ ಸ್ವಾಮೀಜಿಯವರು ಸಮಾಜದ ಸರ್ವ ಭಕ್ತವೃಂದವನ್ನು ಉದ್ದೇಶಿಸಿ ಆಶೀರ್ವದಿಸಿದರು. 29 ರಂದು ಬೆಳಿಗ್ಗೆ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಆಯ್ದಿಸಲಾಯಿತು, ಸುಮಾರು 250ಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ರಕ್ತದಾನದಲ್ಲಿ ಭಾಗಿಯಾದರು. ಹೀಗೆ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜನ ಉಪಯೋಗಿ ಕಾರ್ಯಕ್ರಮವೂ ಈ ಸಮಯದಲ್ಲಿ ನಡೆಯಿತು. ಸುಮಾರು 120ಕ್ಕೂ ಅಧಿಕ ಊರ-ಪರಊರ ದೇವಸ್ಥಾನಗಳಿಂದ ಬಂದಂತಹ ಶಿಷ್ಯ ವೃಂದಾವು ಶ್ರೀ ಗುರುಗಳನ್ನು ಭೇಟಿಯಾಗಿ, ಆಶೀರ್ವಾದವನ್ನು ಪಡೆದುಕೊಂಡರು. ಸಂಜೆ ಪರಮಪೂಜ್ಯ ಸ್ವಾಮೀಜಿಯವರ ದಿಗ್ವಿಜಯ ಮಹೋತ್ಸವವು ಅತಿ ವೈಭವಯುಕ್ತವಾಗಿ ದ್ವಾರಕನಾಥ ಭವನದಿಂದ ಪ್ರಾರಂಭಿಸಿ ನ್ಯಾಷನಲ್ ಕಾಲೇಜ್ ಸಿಗ್ನಲ್, ಗಾಂಧಿ ಬಜಾರ್ ರೋಡ್ ಮೂಲಕ ಪುನಹ ದ್ವಾರಕನಾಥ ಭವನಕ್ಕೆ ಬಂದು ತಲುಪಿತು. ಈ ವೇಳೆ 9 ವಿವಿಧ ರೋಡ್ ಶೋಗಳು, 9 ಅತಿ ಆಕರ್ಷಿತ ಟ್ಯಾಬ್ಲೆಗಳು ಜನಾರ್ಕರ್ಷಣೆಗೊಂಡವು. ಕರಾವಳಿಯ ಹುಲಿಯ ವೇಷ, ಚೆಂಡೆ ವಾದನೆ, ಕರ್ನಾಟಕ ಮತ್ತು ಕೇರಳದ ಜನಪದ ವೇಷಗಳು ಈ ದಿಗ್ವಿಜಯ ಮಹೋತ್ಸವದ ಚಂದವನ್ನು ಇನ್ನಷ್ಟು ಹೆಚ್ಚಿಸಿತ್ತು. ಶ್ರೀ ಮಠದ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾದ ಶ್ರೀನಿವಾಸ್ ದೆಂಪೊ, ಬೆಂಗಳೂರು ಚಾತುರ್ಮಾಸ್ಯ ಕಮಿಟಿಯ ಗೌರವಾಧ್ಯಕ್ಷರಾದ ದಯಾನಂದ ಪೈ, ಅಧ್ಯಕ್ಷರಾದ ಅಮರ್ನಾಥ್ ಕಾಮತ್, ಗೋವಾದ ಮಾಜಿ ಮುಖ್ಯಮಂತ್ರಿಗಳಾದ ದಿಗಂಬರ್ ಕಾಮತ್, ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ, ಇನ್ನಿತರ ಗಣ್ಯಾತಿ ಗಣ್ಯರು ಮತ್ತು ಗೋವಾ, ಮಹಾರಾಷ್ಟ್ರ, ಕೇರಳ ಮತ್ತು ಕರ್ನಾಟಕದ ಸಹಸ್ರಾರು ಸಮಾಜ ಬಾಂಧವರು ದಿಗ್ವಿಜಯ ಮಹೋತ್ಸವದಲ್ಲಿ ಪಾಲ್ಗೊಂಡು, ಪರಮಪೂಜ್ಯ ಸ್ವಾಮೀಜಿಯವರ ಆಶೀರ್ವಾದವನ್ನು ಪಡೆದುಕೊಂಡರು. ಪರಮಪೂಜ್ಯ ಸ್ವಾಮೀಜಿಯವರು 1ನೇ ಅಕ್ಟೋಬರ್ 2024 ರಂದು ತಮ್ಮ ಮುಂದಿನ ಅನಂತ ನಗರದ ಮೊಕಾಂಗೆ ತೆರಳಿದ್ದಾರೆಂದು ಬೆಂಗಳೂರು ಚಾತುರ್ಮಾಸ್ಯ ಕಮಿಟಿಯ ಪ್ರಧಾನ ಕಾರ್ಯದರ್ಶಿಯಾದ ಅಣ್ಣಪ್ಪ ಕಾಮತ್ ರವರು ತಿಳಿಸಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *