Connect with us

    LATEST NEWS

    500ರ ನೋಟಿನಲ್ಲಿ ಗಾಂಧೀಜಿ ಬದಲು ಅನುಪಮ್ ಖೇರ್ – ಚಿನ್ನದ ವ್ಯಾಪಾರಿಗೆ 1.6 ಕೋಟಿ ಪಂಗನಾಮ

    ಅಹಮದಾಬಾದ್ ಸೆಪ್ಟೆಂಬರ್ 30: ಖೋಟಾನೋಟು ನೀಡಿ ಹಣ ವಂಚನೆ ಮಾಡುತ್ತಾರೆ. ಆದರೆ ಖೋಟಾನೋಟಿನಲ್ಲಿ ಬಾಲಿವುಡ್ ನಟನ ಪೋಟೋ ಹಾಕಿ ಗುಜರಾತ್‌ನ ಚಿನ್ನಾಭರಣ ವ್ಯಾಪಾರಸ್ಥರೊಬ್ಬರಿಗೆ ವಂಚಕರು ₹1.3 ಕೋಟಿ ಪಂಗನಾಮ ಹಾಕಿದ ಘಟನೆ ನಡೆದಿದೆ. 500 ರೂಪಾಯಿ ನೋಟಿನಲ್ಲಿ ಗಾಂಧೀಜಿ ಬದಲಿಗೆ ಅನುಪಮ್ ಖೇರ್ ಪೋಟೋ ಇದೆ.


    ಅಹಮದಾಬಾದ್‌ನ ಮಾಣಿಕ್ ಚೌಕ್‌ನ ಮೆಹುಲ್ ಠಕ್ಕರ್ ಅವರೇ ವಂಚನೆಗೊಳಗಾದ ವ್ಯಕ್ತಿ. ಈ ಕುರಿತು ನವರಂಗಪುರ್ ಪೊಲೀಸ್ ಠಾಣೆಯಲ್ಲಿ ಠಕ್ಕರ್ ಅವರು ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
    ಈ ಪ್ರಕರಣದಲ್ಲಿ ವಿಶೇಷವೆಂದರೆ ಠಕ್ಕರ್ ಅವರಿಗೆ ವಂಚಕರು ನೀಡಿದ್ದ ₹500 ಮುಖಬೆಲೆಯ ₹1.6 ಕೋಟಿ ಮೌಲ್ಯದ ನಕಲಿ ನೋಟುಗಳಲ್ಲಿ ಮಹಾತ್ಮಾ ಗಾಂಧೀಜಿ ಚಿತ್ರವಿರುವಲ್ಲಿ ಬಾಲಿವುಡ್ ನಟ ಅನುಪಮ್ ಖೇರ್ ಅವರ ಚಿತ್ರವಿದೆ.


    ಸದ್ಯ ಅನುಪಮ್ ಖೇರ್ ಅವರ ಚಿತ್ರವಿರುವ ₹500 ಮುಖಬೆಲೆಯ ನೋಟುಗಳು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿವೆ. ಅಲ್ಲದೇ ವ್ಯಾಪಕ ಟ್ರೋಲ್ ಕೂಡ ಆಗುತ್ತಿವೆ. ಠಕ್ಕರ್ ಅವರ ಬಳಿ 2 ಕೆ.ಜಿ ಚಿನ್ನ ಖರೀದಿ ಒಪ್ಪಂದ ಮಾಡಿಕೊಂಡಿದ್ದ ವಂಚಕರು ₹1.3 ಕೋಟಿ ನಗದು ಇದೆ ಎಂದು ಹೇಳಿ ಹಣದ ಬ್ಯಾಗ್‌ ಅನ್ನು ಕೊಡಲು ಬಂದಿದ್ದರು. ನಕಲಿ ನೋಟುಗಳ ಜೊತೆಗೆ ತೋರಿಕೆಗೆ ಮೇಲೆ ಕೆಲ ಅಸಲಿ ನೋಟುಗಳನ್ನು ಇಟ್ಟಿದ್ದರು. ಠಕ್ಕರ್ ಅವರ ಆರಂಭಿಕ ನಂಬಿಕೆ ಗಳಿಸಿದ ವಂಚಕರು ಇನ್ನೊಂದು ಅಂಗಡಿ ಬಳಿ ಚಿನ್ನ ಖರೀದಿಸಬೇಕಿದೆ ಎಂದು ಅಲ್ಲಿಂದ ಕಾಲ್ಕಿತ್ತಿದ್ದಾರೆ.

    ಈ ನಕಲಿ ನೋಟು ಪ್ರಕರಣಕ್ಕೆ ಪ್ರತಿಕ್ರಿಯಿಸಿರುವ ಬಾಲಿವುಡ್ ನಟ ಅನುಪಮ್ ಖೇರ್ ಎನುಬೇಕಾದರೂ ಆಗಬಹುದು ಎಂದು ಪೋಸ್ಟ್ ಹಾಕಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply