LATEST NEWS
ಕಾರ್ಕಳ – ಅಗ್ನಿ ದುರಂತದಲ್ಲಿ ಅಸುನೀಗಿದ ಕಂಬಳದ ಮುತ್ತುಗಳಾದ ಅಪ್ಪು ಮತ್ತು ತೋನ್ಸೆ

ಕಾರ್ಕಳ, ಮೇ 31 : ಕಂಬಳದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದ ಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿಯವರಿಗೆ ಸೇರಿದ ಕಂಬಳ ಕೋಣಗಳಾದ ಅಪ್ಪು ಮತ್ತು ತೋನ್ಸೆ ಅಗ್ನಿ ಅವಘಡಕ್ಕೆ ಬಲಿಯಾಗಿದೆ.
ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ ಬೇಲಾಡಿಯಲ್ಲಿ ಶನಿವಾರ ನಸುಕಿನ ವೇಳೆಗೆ ನಡೆದ ಅಗ್ನಿ ದುರಂತದಲ್ಲಿ ಎರಡು ಕೋಣಗಳು ಸಾವನಪ್ಪಿದೆ. ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದಾಗಿ ದುರಂತ ಸಂಭವಿಸಿದೆ ಎನ್ನಲಾಗುತ್ತಿದ್ದು ಬೆಳಗ್ಗೆ ಕೆಲಸದಾಳು ಹಟ್ಟಿಗೆ ತೆರಳಿದಾಗ ಬೆಂಕಿಯಿಂದ ಸುಟ್ಟು ಕರಕಲಾಗಿದ್ದು ಕಂಡುಬಂದಿದೆ.

ಹಲವು ಕಂಬಳ ಕೂಟಗಳಲ್ಲಿ ಚಾಂಪಿಯನ್ ಶಿಪ್ ಗಳನ್ನು ಗೆದ್ದಿದ್ದ ಅಪ್ಪು ಮತ್ತು ತೋನ್ಸೆ ಕೋಣಗಳ ಸಾವು ಕಂಬಳ ಪ್ರೇಮಿಗಳಿಗೆ ಆಘಾತ ತಂದಿದೆ.