LATEST NEWS
ಅಂಗಡಿ ದೋಚಲು ವಿಫಲ ಯತ್ನ

ಅಂಗಡಿ ದೋಚಲು ವಿಫಲ ಯತ್ನ
ಮಂಗಳೂರು ಅಕ್ಟೋಬರ್ 2: ಕಳೆದ ತಡರಾತ್ರಿ ಅಂಗಡಿಗಳನ್ನು ದೋಚಲು ಕಳ್ಳರು ವಿಫಲ ಯತ್ನ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಬಿಜೈ ಬಾಳಿಗಾ ಸ್ಟೋರ್ಸ್ ಬಳಿ ಈ ಘಟನೆ ನಡೆದೆ. ಇಲ್ಲಿಯ ಚಿನ್ನದ ಅಂಗಡಿ ಹಾಗೂ ಮೆಡಿಕಲ್ ಶಾಪ್ ಕಳ್ಳತನಕ್ಕೆ ಯತ್ನ ನಡೆಸಲಾಗಿದೆ.
ಮೆಡಿಪ್ಲಸ್ ಅಂಗಡಿಯ ಗೋಡೆ ಕೊರೆದು ಒಡೆದು ಒಳಹೊಕ್ಕಿದ್ದ ಕಳ್ಳರು ಅಲ್ಲಿ ಏನೂ ಸಿಗದೆ ಖಾಲಿ ಕೈಯಲ್ಲಿ ಮರಳಬಾರದೆಂದು ಪಕ್ಕದ ಚಿನ್ನದ ಅಂಗಡಿಯ ಗೋಡೆಯನ್ನೂ ಅರ್ಧ ಕೊರೆದು ಒಳಹೊಕ್ಕಲು ವಿಫಲ ಯತ್ನ ನಡೆಸಿದ್ದಾರೆ. ಬೆಳಗ್ಗೆ ಮೆಡಿಪ್ಲಸ್ ಸಿಬ್ಬಂದಿ ಅಂಗಡಿ ಬಾಗಿಲು ತೆರೆದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಉರ್ವಾ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
