Connect with us

  DAKSHINA KANNADA

  ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ ವಿಳಂಬ ಕಾರ್ಯಕರ್ತರಲ್ಲಿ ನಿರಾಸೆ

  ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ ವಿಳಂಬ ಕಾರ್ಯಕರ್ತರಲ್ಲಿ ನಿರಾಸೆ

  ಮಂಗಳೂರು ಅಕ್ಟೋಬರ್ 2: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ಕಡಲನಗರಿ ಮಂಗಳೂರಿಗೆ ಆಗಮಿಸಲಿದ್ದಾರೆ. ಅಮಿತ್ ಶಾ ಆಗಮನ ಕರಾವಳಿಯ ಕಮಲಪಾಳಯದಲ್ಲಿ ಸಂಚಲನ ಮೂಡಿಸಿದ್ದು ಅಮಿತ್ ಶಾ ಭೇಟಿ ಹಿನ್ನಲೆಯಲ್ಲಿ ನಗರವನ್ನು ಕೇಸರಿ ಬಂಟಿಗ್ಸ್ ಗಳಿಂದ ಸಿಂಗರಿಸಲಾಗಿದೆ. ಅಮಿತ್ ಶಾ ಸಂಚರಿಸಲಿರುವ ರಸ್ತೆಯ ಇಕ್ಕೆಲಗಳನ್ನು ಬಿಜೆಪಿ ಪತಾಕೆ ಮತ್ತು ಬಂಟಿಗ್ಸ್ ಹಾಕಲಾಗಿದೆ. ಆದರೆ ಅಮಿತ್ ಶಾ ಸ್ವಾಗತಕ್ಕಾಗಿ ಕಾದುಕುಳಿತಿದ್ದ ಕಾರ್ಯಕರ್ತರಲ್ಲಿ ನಿರಾಸೆ ಉಂಟಾಗಿದೆ.

  ಅಮಿತ್ ಶಾ ಮೆರವಣಿಗೆ

  ಪೂರ್ವನಿಗದಿಯಂತೆ ಮಾಡಲಾಗಿದ್ದ ಅಮಿತ್ ಶಾ ಭೇಟಿ ಸಮಯದಲ್ಲಿ ಬದಲಾವಣೆಯಾಗಿದೆ. ಸಂಜೆ ಆರು ಗಂಟೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ತಲುಪಬೇಕಾಗಿದ್ದ ಅಮಿತ್ ಶಾ ಭೇಟಿ ರಾತ್ರಿ ಹನ್ನೊಂದು ಗಂಟೆಗೆ ತಲುಪಲಿದ್ದಾರೆ. ಬಿಜೆಪಿ ರಾಷ್ಟಾಧ್ಯರ ಭೇಟಿ ವಿಳಂಬವಾಗಿರುವ ಹಿನ್ನಲೆಯಲ್ಲಿ ಕೇರಳದ ಗಡಿಭಾಗ ತಲಪಾಡಿ ತನಕ ಮೆರವಣಿಗೆ ಮೂಲಕ ಕರೆದುಕೊಂಡು ಹೋಗುವ ಕಾರ್ಯಕರ್ತರ ಪ್ಲಾನ್ ಗೆ ತಡೆಯಾಗಿದೆ. ಇಂದು ರಾತ್ರಿ ಕೇರಳಕ್ಕೆ ಹೋಗಲಿರುವ ಅವರು ನಾಳೆ ಕೇರಳದ ಪಯ್ಯನೂರಿನಲ್ಲಿ ಪಾದಯಾತ್ರೆ ಯಲ್ಲಿಭಾಗವಹಿಸಲಿದ್ದಾರೆ. ನಾಳೆ ರಾತ್ರಿ ಮಂಗಳೂರಿಗೆ ಭೇಟಿ ನೀಡಲಿರುವ ಅಕ್ಟೋಬರ್ ನಾಲ್ಕರಂದು ಮಂಗಳೂರಿನಲ್ಲಿ ಇಡೀ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

   

  Share Information
  Advertisement
  Click to comment

  You must be logged in to post a comment Login

  Leave a Reply