FILM
ತೆಲುಗು ಬಿಗ್ ಬಾಸ್ ನಲ್ಲಿ ಅಬ್ಬರಿಸಿದ್ದ ಶೋಭಾ ಶೆಟ್ಟಿ – ಕನ್ನಡ ಬಿಗ್ ಬಾಸ್ ನಲ್ಲಿ ಅರ್ಧದಲ್ಲೇ ಕ್ವಿಟ್…?
ಬೆಂಗಳೂರು ಡಿಸೆಂಬರ್ 01: ತೆಲುಗು ಬಿಗ್ ಬಾಸ್ ನಲ್ಲಿ ಅಬ್ಬರಿಸಿ ಫೈನಲ್ ವರೆಗೆ ಹೋಗಿ ಹೆಸರು ಮಾಡಿದ್ದ ಕನ್ನಡತಿ ಶೋಭಾ ಶೆಟ್ಟಿ ಕನ್ನಡ ಬಿಗ್ ಬಾಸ್ ನಲ್ಲಿ ಮಾತ್ರ ಸೈಲೆಂಟ್ ಆಗಿದ್ದು, ಇದೀಗ ಬಿಗ್ ಬಾಸ್ ಶೋ ನ್ನು ಅರ್ಧದಲ್ಲೇ ಬಿಟ್ಟಿದ್ದಾರೆ ಎಂದು ಹೇಳಲಾಗಿದೆ.
ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಶೋಭಾ ಶೆಟ್ಟಿ ಮೊದಲ ವಾರರದಲ್ಲಿ ಅಬ್ಬರಿಸಿದ್ದರು, ಬಳಿಕ ಸೈಲೆಂಟ್ ಆದ ಶೋಭಾ ಶೆಟ್ಟಿ ಈ ವಾರ ಸಂಪೂರ್ಣ ಕಳೆದು ಹೋಗಿದ್ದರು, ಅಲ್ಲದೆ ಕಳಪೆ ಪಟ್ಟ ಕೂಡ ಪಡೆದಿದ್ದರು. ಆದರೆ ಈಗ ಶೋಭಾ ಶೆಟ್ಟಿಗೆ ಮನೆಗೆ ಹೊಂದಿಕೊಳ್ಳಲು ಆಗುತ್ತಿಲ್ಲ. ಮನೆಗೆ ಬಂದ ಆರಂಭದಲ್ಲಿ ಜೋಶ್ನಲ್ಲಿದ್ದ ಶೋಭಾ ಶೆಟ್ಟಿ ಕೆಲವೇ ದಿನಕ್ಕೆ ಮಂಕಾಗಿದ್ದರು. ಈಗಂತೂ ಮನೆಯಿಂದ ಹೊರಗೆ ಹೋಗುವ ಮಾತಾಡುತ್ತಿದ್ದಾರೆ.
ಈ ವಾರ ಶೋಭಾ ಶೆಟ್ಟಿ ನಾಮಿನೇಟ್ ಆಗಿದ್ದರು. ಆದರೆ ಜನ ವೋಟ್ ಮಾಡಿ ಅವರನ್ನು ಉಳಿಸಿದ್ದಾರೆ. ಆದರೆ ಶೋಭಾ ಶೆಟ್ಟಿಗೆ ಮನೆಯಲ್ಲಿ ಉಳಿದು ಕೊಳ್ಳಲು ಇಷ್ಟವಿಲ್ಲ. ಹೀಗೆಂದು ಸುದೀಪ್ ಮುಂದೆ ಹೇಳಿಕೊಂಡಿರುವ ಶೋಭಾ ಶೆಟ್ಟಿ, ಕೈ ಮುಗಿದು ಸುದೀಪ್ ಎದುರು ಅಂಗಲಾಚಿದ್ದು, ತಾನು ಮನೆಯಿಂದ ಹೊರಗೆ ಹೋಗಬೇಕು ಎಂದು ಕೇಳಿಕೊಂಡಿದ್ದಾರೆ. ಆರಂಭದಲ್ಲಿ ಶೋಭಾ ಶೆಟ್ಟಿಗೆ ಬುದ್ಧಿವಾದ ಹೇಳಿದ ಸುದೀಪ್, ‘ನೀವು ಯಾವ ಉದ್ದೇಶ ಇಟ್ಟುಕೊಂಡು ಈ ಮನೆಗೆ ಬಂದಿರಿ ಎಂಬುದನ್ನು ಒಮ್ಮೆ ಯೋಚನೆ ಮಾಡಿ’ ಎಂದರು. ಆ ಬಳಿಕ, ‘ನಿಮಗೆ ಮತ ಹಾಕಿ ಉಳಿಸಿಕೊಂಡ ಮತದಾರರಿಗೆ ಏನು ಹೇಳುತ್ತೀರಿ, ಅವರಿಗೆ ನೀವು ಅನ್ಯಾಯ ಮಾಡುತ್ತಿದ್ದೀರಿ’ ಎಂದು ಸಹ ಸುದೀಪ್ ಹೇಳಿದರು. ಏನೇ ಆದರೂ ಸಹ ಶೋಭಾ ಶೆಟ್ಟಿ, ತಾನು ಮನೆಗೆ ಹೋಗಲೇ ಬೇಕು ಎಂದು ಒತ್ತಾಯ ಮಾಡಿದರು. ಕೊನೆಗೆ ಶೋಭಾ ಶೆಟ್ಟಿ ಮಾತುಗಳಿಗೆ ರೋಸಿ ಹೋದ ಸುದೀಪ್ ಬಿಗ್ಬಾಸ್ ಮನೆ ಬಾಗಿಲು ತೆಗೆಸಿದ್ದಾರೆ. ಶೋಭಾ ಶೆಟ್ಟಿ ಮನೆಗೆ ಹೋಗಿದ್ದಾರೋ ಇಲ್ಲವೋ ಎಂಬುದು ಭಾನುವಾರ ರಾತ್ರಿ ಎಪಿಸೋಡ್ ಪ್ರಸಾರವಾದಾಗ ತಿಳಿದು ಬರಲಿದೆ.
ಸೂಪರ್ ಸಂಡೇ ವಿತ್ ಬಾದ್ಷಾ ಸುದೀಪ | ಇಂದು ರಾತ್ರಿ 9 #BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/ypkz2sfD2t
— Colors Kannada (@ColorsKannada) December 1, 2024