Connect with us

    KARNATAKA

    ಬಿಜೆಪಿಗಾಗಿ ನನ್ನನ್ನೇ ಅರ್ಪಿಸಿಕೊಂಡಿದ್ದೇನೆ…ನನಗೆ ಗೋಬ್ಯಾಕ್ ಅನ್ನುವುದು ಸರಿಯಲ್ಲ – ಶೋಭಾ ಕರಂದ್ಲಾಜೆ

    ವಿಜಯಪುರ ಮಾರ್ಚ್ 13: ಚಿಕ್ಕಮಗಳೂರು ಹಾಗೂ ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ದವಾಗಿ ನಡೆಯುತ್ತಿರುವ ಗೋಬ್ಯಾಕ್ ಅಭಿಯಾನಕ್ಕೆ ಸಂಸಗೆ ಶೋಭಾ ಕರಂದ್ಲಾಜೆ ಗರಂ ಆಗಿದ್ದು, ಬಿಜೆಪಿಗಾಗಿ ನನ್ನನ್ನೇ ಅರ್ಪಿಸಿಕೊಂಡಿದ್ದೇನೆ. ಹೀಗಿರುವಾಗ ನನ್ನನ್ನು ಗೋ ಬ್ಯಾಕ್ ಎನ್ನುವುದು ಸರ್ವತಾಸಾಧುವಲ್ಲ ಎಂದಿದ್ದಾರೆ.


    ವಿಜಯಪುರದಲ್ಲಿ ಮಾತನಾಡಿದ ಅವರು, ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೊಂದಲವಿದೆ, ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲೋ ಕ್ಷೇತ್ರ ಹಾಗಾಗಿ ಬೇಡಿಕೆಯಿದೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿನ ಜನರು ‌ನನ್ನನ್ನು ಎರಡು ಬಾರಿ ಗೆಲ್ಲಿಸಿದ್ದಾರೆ. ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲಿ ಹತ್ತಾರು ಅಭಿವೃದ್ಧಿ ಮಾಡಿದ್ದೇನೆ. ಗೋ ಬ್ಯಾಕ್​ ಅನ್ನುವುದು ಶೋಭಾಯಮಾನವಲ್ಲ, ನಾನು ಪಕ್ಷಕ್ಕಾಗಿ ತಳಮಟ್ಟದಿಂದ ದುಡ್ಡಿದಿದ್ದೇನೆ, ಕ್ಯಾಬಿನೆಟ್​​ನಲ್ಲಿ ಸೇವೆ ಸಲ್ಲಿಸಿದ್ದೇನೆ, ಒಟ್ಟಿನಲ್ಲಿ ಬಿಜೆಪಿಗಾಗಿ ನನ್ನನ್ನೇ ಅರ್ಪಿಸಿಕೊಂಡಿದ್ದೇನೆ. ಹೀಗಿರುವಾಗ ನನ್ನನ್ನು ಗೋ ಬ್ಯಾಕ್ ಎನ್ನುವುದು ಸರ್ವತಾಸಾಧುವಲ್ಲ ಎಂದಿದ್ದಾರೆ.

    ಬೇರೆಯವರು ಟಿಕೆಟ್ ಕೇಳಿದ್ದು ತಪ್ಪಲ್ಲ, ಆದ್ರೆ ಹಾಲಿ ಸಂಸದೆಯಾಗಿ ನನಗೆ ಅವಮಾನ ಮಾಡುವ ರೀತಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ಹೊರಗಿನವರು ಬಂದು ಗೋಬ್ಯಾಕ್​ ಅಭಿಯಾನ ಮಾಡುತ್ತಿದ್ದಾರೆ. ಇದು ಎಷ್ಟರಮಟ್ಟಿಗೆ ಸರಿ? ‌ನಾನು ವಿಚಲಿತಳಾಗಿಲ್ಲ, ನಮ್ಮ ಕಾರ್ಯಕರ್ತರು ಸಹ ವಿಚಲಿತರಾಗಿಲ್ಲ ಎಂದು ಸ್ಪಷ್ಟಪಡಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply