DAKSHINA KANNADA
ಮುಖ್ಯಮಂತ್ರಿ ಸಿದ್ದರಾಮಯ್ಯ ಓರ್ವ ಕ್ರೂರಿ – ಶೋಭಾ ಕರಂದ್ಲಾಜೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಓರ್ವ ಕ್ರೂರಿ – ಶೋಭಾ ಕರಂದ್ಲಾಜೆ
ಸುಳ್ಯ ಎಪ್ರಿಲ್ 20: ಮುಖ್ಯಮಂತ್ರಿ ಸಿದ್ದರಾಮಯ್ಯ ಒರ್ವ ಕ್ರೂರಿಯಾಗಿದ್ದು, ಇಂಥ ಮುಖ್ಯಮಂತ್ರಿಯನ್ನು ರಾಜ್ಯ ಹಿಂದೆಂದೂ ನೋಡಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಸಿಎಂ ವಿರುದ್ದ ಕಿಡಿಕಾರಿದ್ದಾರೆ. ಇಂದು ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಅಂಗಾರ ನಾಮಪತ್ರ ಸಲ್ಲಿಸುವ ಪ್ರಯುಕ್ತ ಸುಳ್ಯದಲ್ಲಿ ಬೃಹತ್ ಕಾರ್ಯಕರ್ತರ ಸಭೆ ನಡೆಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಕಾಂಗ್ರೇಸ್ ಪಕ್ಷ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಹರಿಹಾಯ್ದರು.
ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕಾಂಗ್ರೇಸ್ ಪಕ್ಷ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಹರಿಹಾಯ್ದರು. ಸಿದ್ದರಾಮಯ್ಯ ಒರ್ವ ಕ್ರೂರಿಯಾಗಿದ್ದು, ಇಂಥ ಮುಖ್ಯಮಂತ್ರಿಯನ್ನ ರಾಜ್ಯ ಹಿಂದೆಂದೂ ಕಂಡಿಲ್ಲ. ಟಿಪ್ಪು ಸುಲ್ತಾನ ಹೆಸರಿನಲ್ಲಿ ಧರ್ಮ ಧರ್ಮಗಳ ನಡುವೆ ಕಚ್ಚಾಡುವಂತೆ ಮಾಡಿದ ಮುಖ್ಯಮಂತ್ರಿ ಕ್ರೂರಿ ಎಂದು ಜರೆದರು.
ಹಿಂದೂಗಳ ಮಧ್ಯೆ ಬಿರುಕನ್ನು ಉಂಟುಮಾಡಿ ಲಿಂಗಾಯುತ, ವೀರಶೈವ ರನ್ನು ಒಡೆದರು. ಕಳೆದ ಎಪ್ಪತ್ತು ವರ್ಷಗಳಿಗಿಂದೀಚೆಗೆ ಸಾಕಷ್ಟು ಮುಖ್ಯಮಂತ್ರಿಗಳು ರಾಜ್ಯವನ್ನಾಳಿದ್ದು, ಇಂಥಹ ಮನಸ್ಥಿತಿಯ ಮುಖ್ಯಮಂತ್ರಿಯನ್ನು ಯಾವತ್ತೂ ಕಂಡಿಲ್ಲ ಎಂದರು.
You must be logged in to post a comment Login