LATEST NEWS
ಇಂಧನ ಖಾತೆಯ ಅವ್ಯವಹಾರ ಮುಚ್ಚಿ ಹಾಕಲು ಡಿಕೆಶಿಗೆ ಇಂಧನ ಖಾತೆಯೇ ಬೇಕು – ಶೋಭಾ

ಇಂಧನ ಖಾತೆಯ ಅವ್ಯವಹಾರ ಮುಚ್ಚಿ ಹಾಕಲು ಡಿಕೆಶಿಗೆ ಇಂಧನ ಖಾತೆಯೇ ಬೇಕು – ಶೋಭಾ
ಮಂಗಳೂರು ಜೂನ್ 05: ಹಿಂದಿನ ಕಾಂಗ್ರೇಸ್ ಸರಕಾರದ ಅವಧಿಯಲ್ಲಿ ಇಂಧನ ಖಾತೆಯಲ್ಲಿ ನಡೆದಿರುವ ಅಕ್ರಮಗಳನ್ನು ಮುಚ್ಚಿಹಾಕಲು ಆಗಿನ ಇಂಧನ ಸಚಿವರು ಅದೇ ಖಾತೆಗೆ ಪಟ್ಟು ಹಿಡಿದಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ ರಾಜ್ಯದ ಇಂಧನ ಖಾತೆಗಾಗಿ ಭಾರೀ ಕಚ್ಚಾಟ ನಡೆಸಲಾಗುತ್ತಿದೆ. ಈ ಹಿಂದಿನ ಸರಕಾರದ ಸಂದರ್ಭದಲ್ಲಿ ಇಂಧನ ಇಲಾಖೆಯಲ್ಲಿ ನಡೆದ ಅವ್ಯವಹಾರ ಗಳನ್ನು ಮುಚ್ಚಿಹಾಕಲು ಈ ಕಸರತ್ತು, ಸ್ಪರ್ದೆ ನಡೆಸಲಾಗುತ್ತಿದೆ ಎಂದು ಅವರು ಪರೋಕ್ಷವಾಗಿ ಡಿ ಕೆ ಶಿವಕುಮಾರ್ ಅವರನ್ನು ಕುಟುಕಿದರು.

ರಾಜ್ಯ ದಲ್ಲಿ ಅಸ್ಥಿತ್ವಕ್ಕೆ ಬಂದ ಸರಕಾರ ಕೇವಲ ರೆಸಾರ್ಟ್ ಹಾಗು ದೆಹಲಿ ರಾಜಕಾರಣ ಮಾಡಿಕೊಂಡು ಕಾಲ ಕಳೆಯುತ್ತಿದೆ. ರಾಜ್ಯದ ಜನರ ಸಮಸ್ಯೆ ಆಲಿಸಲು ಯಾರೀಗೂ ಸಮಯವಿಲ್ಲ . ಎಲ್ಲರೂ ಖಾತೆಗಾಗಿ ಲಾಬಿ ನಡೆಸುವುದರಲ್ಲೇ ತಲ್ಲಿನರಾಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಅಗಿ ಹದಗೆಟ್ಟಿದೆ ಎಂದು ಅವರು ಕಿಡಿಕಾರಿದರು. ಮತ್ತೇ ರೈತರ ಆತ್ಮಹತ್ಯೆ ಮುಂದುವರೆದಿದೆ . ಆದರೆ, ಕಾಂಗ್ರೆಸ್, ಜೆಡಿಎಸ್ ಮಾತ್ರ ಇದರ ಪರಿವೇ ಇಲ್ಲದಂತೆ ವರ್ತಿಸುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.