LATEST NEWS
ಕೇವಲ ಒಂದು ಬೈಕ್ ಜಾಥಾಕ್ಕೆ ಹೆದರಿದ ಕಾಂಗ್ರೇಸ್ ಸರಕಾರ – ಶೋಭಾ ಕರಂದ್ಲಾಜೆ
ಮಂಗಳೂರು ಸೆಪ್ಟೆಂಬರ್ 6: ಮಂಗಳೂರು ಚಲೋ ಪ್ರತಿಭಟನಾ ಸಭೆ ನಗರದ ಜ್ಯೋತಿ ವೃತ್ತದಲ್ಲಿ ನಡೆದಿದೆ. ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ ಯಡಿಯೂರಪ್ಪ ಸಂಸದರಾದ ಪ್ರತಾಪ್ ಸಿಂಹ, ಸಂಸದೆ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವರುಗಳಾದ ಸಿ.ಟಿ ರವಿ, ಆರ್ ಅಶೋಕ್, ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಚರ್ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಸಿದ್ಧರಾಮಯ್ಯ ಸರಕಾರದಿಂದ ಅಘೋಷಿತ ತುರ್ತು ಪರಿಸ್ಥಿತಿ ಹೇರಲಾಗಿದೆ. ಶಾಂತಿಯುತವಾಗಿ ಮಂಗಳೂರು ಚಲೋ ಜಾಥಾಕ್ಕೆ ಹೊರಟಂತಹ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಯಕರ್ತರನ್ನು ಯಾತಕ್ಕಾಗಿ ಬಂಧಿಸಿದ್ದಾರೆ? ಅವರಲ್ಲೇನು ಶಸ್ತ್ರಾಸ್ತ್ರವಿತ್ತೇ? ದುಷ್ಕರ್ಮಿಗಳ ಬಂಧನದ ಬದಲು ಅಮಾಯಕರ ಬಂಧನ ಎಷ್ಟು ಸರಿ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಈವರೆಗೆ ನಡೆದಿರುವ ಹಿಂದೂ ಕಾರ್ಯಕರ್ತರ ಕೊಲೆ ಹಾಗೂ ಹಿರಿಯ ಪರ್ತಕರ್ತೆ ಗೌರಿ ಲಂಕೇಶರ ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸುವ ತಾಕತ್ ಸರಕಾರಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು. ೬ ತಿಂಗಳ ನಂತರ ಯಡಿಯೂರಪ್ಪ ನೇತೃತ್ವದ ಸರಕಾರ ರಾಜ್ಯದಲ್ಲಿ ಬರಲಿದೆ. ಕೇವಲ ಒಂದು ಬೈಕ್ ಜಾಥಾಕ್ಕೆ ಕಾಂಗ್ರೆಸ್ ಹೆದರಿದೆ, ಆದರೆ ಹೋರಾಟಕ್ಕೆ ಬಿಜೆಪಿಯಲ್ಲಿ ಸಾಕಷ್ಟು ಮಾರ್ಗ ಗಳಿದ್ದು ಮುಂಬರುವ ದಿನಗಳಲ್ಲಿ ಹಲವಾರು ಹೋರಾಟಗಳು ಕಾಂಗ್ರೇಸ್ ನ್ನು ಕಾಡಲಿದೆ ಎಂದು ಅವರು ತಿಳಿಸಿದರು.
You must be logged in to post a comment Login