LATEST NEWS
ಮಂಗಳೂರು ಚಲೋ ಪ್ರತಿಭಟನಾ ಸಭೆ ಆರಂಭ

ಮಂಗಳೂರು ಸೆಪ್ಟೆಂಬರ್ 7: ರಾಜ್ಯದಲ್ಲಿ ಅತಿ ಕುತೂಹಲ ಮೂಡಿಸಿದ್ದ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡ ಮಂಗಳೂರು ಚಲೋ ಪ್ರತಿಭಟನಾ ಸಭೆ ಆರಂಭಗೊಂಡಿದೆ. ರಾಜ್ಯದ ನಾನಾ ಭಾಗಗಳಿಂದ ಬಂದಿರುವ ಸಾವಿರಾರು ಬಿಜೆಪಿ ಕಾರ್ಯಕರ್ತರು ಮಂಗಳೂರಿನ ಜ್ಯೋತಿ ವೃತದಲ್ಲಿ ಸೇರಿದ್ದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ . ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ,ಬಿಜೆಪಿ ಮುಖಂಡರಾದ ಕಟ್ಟಾ ಸುಬ್ರಮಣ್ಯ ನಾಡು ,ರಾಜ್ಯ ಬಿಜೆಪಿಯ ಮೋರ್ಚಾ ಅಧ್ಯಕ್ಷ ಪ್ರತಾಪ್ ಸಿಂಹ ,ಆರ್ ಅಶೋಕ್ ,ಸಿಟಿ ರವಿ ,ಸುನೀಲ್ ಕುಮಾರ್ ,ನಳಿನ್ ಕುಮಾರ್ ಕಟೀಲ್ ,ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಈಶ್ವರಪ್ಪ ಅರವಿಂದ್ ನಿಂಬಾವಳಿ,ಶೋಭಾ ಕರಂದ್ಲಾಜೆ ಮತ್ತಿತರರು ಉಪಸ್ಥಿತರಿದ್ದರು.