LATEST NEWS
ಕೃಷಿ ಹೋರಾಟಗಾರರ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ

ಉಡುಪಿ ಡಿಸೆಂಬರ್ 18: ಕೇಂದ್ರ ಸರಕಾರ ಕೃಷಿ ಕಾಯ್ದೆ ವಿರುದ್ದ ಹೋರಾಟ ನಡೆಸುತ್ತಿರುವ ರೈತ ಹೋರಾಟಗಾರರ ವಿರುದ್ದ ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ. ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಸಂಸದೆ ಶೋಭಾ ಕರಂದ್ಲಾಜೆ, ದೇಶದಲ್ಲಿ ಎಪಿಎಂಸಿ ವ್ಯವಸ್ಥೆ ರೈತರ ರಕ್ತ ಹೀರುತ್ತಿದೆ, ಎಪಿಎಂಸಿ ದಲ್ಲಾಳಿಗಳು ರೈತರನ್ನು ಶೋಷಣೆ ಮಾಡುತ್ತಿದ್ದಾರೆ ಎಂದ ಅವರು ಈ ಕಾಯ್ದೆ ಬಂದರೂ ಎಪಿಎಂಸಿ ವ್ಯವಸ್ಥೆ ಹಾಗೆ ಇರಲಿದೆ ಎಂದು ದ್ವಂದ್ವ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಪಿಎಂಸಿ ರದ್ದು ಮಾಡುವುದಾಗಿ ಭರವಸೆ ಕೊಟ್ಟಿತ್ತು, 2010ರಲ್ಲಿ ಕೃಷಿ ಸಚಿವ ಶರದ ಪವಾರ್ ಎಲ್ಲ ರಾಜ್ಯಗಳಿಗೆ ಪತ್ರ ಬರೆದು ಕೃಷಿ ಹೂಡಿಕೆಯಲ್ಲಿ ಖಾಸಗಿ ಪಾಲುದಾರಿಕೆಯ ಬಗ್ಗೆ ಅಭಿಪ್ರಾಯ ಕೇಳಿದ್ದರು. ತಮಿಳುನಾಡಿನಲ್ಲಿ ಡಿಎಂಕೆ ಕೂಡ ಎಪಿಎಂಸಿ ಕಾಯ್ದೆ ರದ್ದು ಮಾಡುವ ಆಶ್ವಾಸನೆ ಕೊಟ್ಟಿತ್ತು. ಕಾಂಗ್ರೆಸ್ ಆಡಳಿತ ನಡೆಸಿದ ಕೇರಳದಲ್ಲಿ ಎಪಿಎಂಸಿ ಕಾನೂನೇ ಜಾರಿಯಲ್ಲಿಲ್ಲ. ರಾಹುಲ್ ಗಾಂಧಿಯವರು ಕಾಂಗ್ರೆಸ್ ಸರಕಾರವಿದ್ದ ರಾಜ್ಯಗಳಿಗೆ ಹಣ್ಣು ಮತ್ತು ತರಕಾರಿಗಳನ್ನು ಎಪಿಎಂಸಿ ವ್ಯಾಪ್ತಿಯಿಂದ ಹೊರಗಿಡುವಂತೆ ಪತ್ರ ಬರೆದಿದ್ದರು.

ಅಲ್ಲದೆ ಸಂಸತ್ ನಲ್ಲಿ ರೈತ ಮಸೂದೆ ಪಾಸ್ ಆದಾಗ ಎಲ್ಲಾ ಪಕ್ಷಗಳು ಭಾಗವಹಿಸಿದ್ದವು. ರೈತ ಮಸೂದೆಯ ಬಗ್ಗೆ ಸುದೀರ್ಘ ಚರ್ಚೆಯೂ ನಡೆದಿತ್ತು. ಈ ಮಸೂದೆ ಎರಡು ಮೂರು ದಶಕಗಳ ಬೇಡಿಕೆಯಾಗಿದೆ, ಪಾರ್ಲಿಮೆಂಟ್ ನಲ್ಲಿ ಕೃಷಿ ಸ್ಥಾಯಿ ಸಮಿತಿ ಇದ್ದು ಈ ಬಿಲ್ ಕೂಡಾ ಸ್ಥಾಯಿ ಸಮಿತಿಗೆ ಹೋಗಿತ್ತು, ಅಲ್ಲಿ ಕಾಂಗ್ರೆಸ್ ಸಂಸದರು ಇದ್ದಾರೆ. ಅಂದು ಒಪ್ಪಿಕೊಂಡಿದ್ದ ಅಮರೇಂದರ್ ಸಿಂಗ್ ಈಗ ವಿರೋಧ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಎಪಿಎಂಸಿ ನೂ ಇರುತ್ತೆ, ಉತ್ತಮ ಬೆಲೆ ಸಿಕ್ರೆ ಖಾಸಗಿ ಮಾರಾಟ ಮಾಡಬಹುದು. ಎಪಿಎಂಸಿ ಮಾರಾಟಕ್ಕೆ ಯಾರೂ ತಡೆಯಲ್ಲ ಎಂದರು.
ರೈತರಿಗೆ ಈ ತಿದ್ದುಪಡಿ ಯಿಂದ ಲಾಭ ಆಗುತ್ತೆ, ಅನುಭವದ ಆಧಾದಲ್ಲಿ ಮೋದಿ ಈ ಮಸೂದೆ ತಂದಿದ್ದಾರೆ. ಗುಜರಾತ್ ನಲ್ಲಿ ರೈತರ ಅದಾಯ ಡಬ್ಬಲ್ ಮಾಡಿದ್ದಾರೆ. ಅದೇ ಆಧಾರದಲ್ಲಿ ರಾಷ್ಟ್ರದಲ್ಲಿ ಈ ಕಾಯ್ದೆ ತಂದಿದ್ದಾರೆ. ಕಾಂಟ್ರಾಕ್ಟ್ ಫಾರ್ಮಿಂಗ್ ಗೆ ಅನುಕೂಲ ಆಗುತ್ತೆ. ಬೀಜ, ಗೊಬ್ವರ ಕೊಟ್ಟು ಖಾಸಗಿಯವರು ಬೆಳೆ ಖರೀದಿ ಮಾಡಿದ್ರೆ ತಪ್ಪೇನು, ಖಾಸಗಿ ಕಂಪೆನಿ ಮತ್ತು ರೈತರ ನಡುವಿನ ಒಪ್ಪಂದಕ್ಕೆ ಕಾನೂನಿಗೆ ಬೆಂಬಲ ಸಿಗಲಿದೆ. ರೈತರ ಅದಾಯ 2023 ವೇಳೆಗೆ ಇಮ್ಮಡಿ ಮಾಡುವ ಉದ್ದೇಶ ಇದೆ ಎಂದರು.