Connect with us

BELTHANGADI

ವಾಟ್ಸಪ್ ಮೂಲಕ 60 ಬಿಟ್ ಕಾಯಿನ್ ಗೆ ಬೇಡಿಕೆ ಇಟ್ಟ ಅಪಹರಣಕಾರರು

ಬೆಳ್ತಂಗಡಿ ಡಿಸೆಂಬರ್ 18: ಉಜಿರೆಯಲ್ಲಿ ಬಾಲಕನ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಹರಣಕಾರರು ಬಾಲಕನ ತಂದೆ ಬಿಜೋಯ್ ಜೊತೆ ವಾಟ್ಸಪ್ ಮೂಲಕ ಸಂಪರ್ಕ ಮಾಡಿದ್ದು, ಬಾಲಕ ಬಿಡುಗಡೆಗೆ 60 ಬಿಟ್ ಕಾಯಿನ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.


ಕಿಡ್ನಾಪ್ ಆಗಿರುವ ಬಾಲಕ ಅನುಭವ್ ಅವರ ತಂದೆ ಬಿಜೋಯ್ ಅವರಿಗೆ ವಾಟ್ಸಪ್ ಮೆಸೇಜ್ ಕಳುಹಿಸಿರುವ ಅಹರಣಕಾರರು ಮಗನ ಬಿಡುಗಡೆಗೆ 60 ಬಿಟ್ ಕಾಯಿನ್ ನೀಡುವಂತೆ ಬೆಡಿಕೆ ಇಟ್ಟಿದ್ದಾರೆ. ಸದ್ಯ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 60 ಬಿಟ್ ಕಾಯಿನ್ ಗೆ ಅಂದಾಜು 10 ಕೋಟಿ ರೂಪಾಯಿ ಬೆಲೆ ಇದೆ.

ಈಗಾಗಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಶೋಧ ಕಾರ್ಯ ಮುಂದುವರೆಸಿದ್ದು, ಬಾಲಕನ ಮನೆಗೆ ಭೇಟಿ ನೀಡಿದ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ನೇತೃತ್ವದ ತಂಡ, ಅಪಹರಣಕಾರರ ವಾಟ್ಸಪ್ ಮೆಸೇಜ್ ನ್ನು ಪರಿಶೀಲಿಸಿದ್ದಾರೆ.