Connect with us

WORLD

ಪಾರ್ಟಿ ಮೂಡ್ ನಲ್ಲಿರುವ ಕೊರೊನಾ ಹಾಟ್ ಸ್ಪಾಟ್ ವುಹಾನ್…

ಚೀನಾ : ಇಡೀ ಪ್ರಪಂಚದ ಖುಷಿ ಸಂಭ್ರಮವನ್ನು ಕಸಿದ ಕೊರೊನಾ ಹಾಟ್ ಸ್ಪಾಟ್ ಚೀನಾದ ವುಹಾನ್ ನಲ್ಲಿ ಈಗ ಪಾರ್ಟಿ ಮೂಡನಲ್ಲಿದೆ. ಬಹುತೇಕ ಇಡೀ ಪ್ರಪಂಚ ಇನ್ನೂ ಕೊರೊನಾದ ಕರಿಛಾಯೆಯಿಂದ ಹೊರ ಬಾರದೆ ಕಷ್ಟಪಡುತ್ತಿದ್ದರೆ. ವುಹಾನ್ ಮಾತ್ರ ತನ್ನದೇ ಲೋಕದಲ್ಲಿ ವಿಹರಿಸುತ್ತಿದೆ. ರಾಯಿಟರ್ಸ್ ಮಾಧ್ಯಮ ಸಂಸ್ಥೆ ಗ್ರೌಂಡ್ ಝಿರೋದಲ್ಲಿ ಕಂಡ ವುಹಾನ್ ನ ಸಂಭ್ರಮ ಇಡೀ ಪ್ರಪಂಚವನ್ನೇ ಬೆಚ್ಚಿಬಿಳಿಸಿದೆ. ರಾಯಿಟರ್ಸ್ ಸಂಸ್ಥೆ ತೆಗೆದ ವುಹಾನ್ ನ ಪೋಟೋಗಳು ಈಗ ಸಾಮಾಜಿಕ ವೈರಲ್ ಆಗಿದೆ.


ಕೊರೊನಾ ವೈರಸ್ ಹುಟ್ಟಿದ ವುಹಾನ್ ಈಗ ಸಂಪೂರ್ಣ ಬದಲಾಗಿದೆ. ಮಾರಣಾಂತಿಕ ಸಾಂಕ್ರಾಮಿಕ ರೋಗವನ್ನು ಇಡೀ ವಿಶ್ವಕ್ಕೆ ಹಬ್ಬಿದ ಚೀನಾದ ವುಹಾನ್ ತನ್ನ ಕಟ್ಟುನಿಟ್ಟಿನ ಲಾಕ್ ಡೌನ್ ನಿಂದಾಗಿ ಇಂದು ಕೊರೊನಾದಿಂದ ಸಂಪೂರ್ಣ ಮುಕ್ತವಾಗಿದೆ.
ಈ ಕುರಿತಂತೆ ರಾಯಿಟರ್ಸ್ ಮಾಧ್ಯಮಸಂಸ್ಥೆ ಗ್ರೌಂಡ್ ಝೀರೋದ ವುಹಾನ್ ಸಂಭ್ರಮವನ್ನು ವರದಿ ಮಾಡಿದ್ದು, 9 ತಿಂಗಳ ಹಿಂದೆ ಸಂಪೂರ್ಣ ಡೆಡ್ ಸಿಟಿ ಆಗಿದ್ದ ವುಹಾನ್ ಈಗ ಯಾವ ರೀತಿ ಇದೆ ಎನ್ನುವುದುನ್ನು ಪೋಟೋಗಳ ಮೂಲಕ ತೋರಿಸಿ ಕೊಟ್ಟಿದೆ.


ಇಡೀ ವಿಶ್ವವೇ ಇನ್ನೂ ಕೊರೊನಾದ ಸಂಕಷ್ಟದಿಂದ ಮುಕ್ತಿ ಹೊಂದಿಲ್ಲ. ಕೊರೊನಾಗೆ ಲಸಿಕೆಗಳು ಇನ್ನೂ ಅಭಿವೃದ್ದಿ ಹಂತದಲ್ಲಿದ್ದು, ಕೊರೊನಾದ ಎರಡನೇ ಅಲೆ ಬಗ್ಗೆ ಕೆಲವು ದೇಶಗಳು ಚಿಂತಿತವಾಗಿವೆ. ಆದರೆ ಇಡೀ ವಿಶ್ವಕ್ಕೆ ಕೊರೊನಾ ಹಬ್ಬಿಸಿದ ಚೀನಾ ಮಾತ್ರ ಸಂತೋಷವಾಗಿದೆ.


ವುಹಾನ್ ನಲ್ಲಿ ಈಗ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಇಲ್ಲದೆ ಜನರು ಪಾರ್ಟಿಗಳಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಮಾಲ್ ಗಳು , ಹೊಟೇಲ್ ಗಳು ಎಲ್ಲಾ ಕಡೆ ಜನರು ಯಾವುದೇ ರೀತಿಯ ಆತಂಕ ಇಲ್ಲದೆ ಓಡಾಡುತ್ತಿದ್ದಾರೆ.

Facebook Comments

comments