LATEST NEWS
ರಂಜದಕಟ್ಟೆ ಬಳಿ ಸೇತುವೆ ಶಿಥಿಲ ತೀರ್ಥಹಳ್ಳಿ- ಉಡುಪಿ ಹೆದ್ದಾರಿ ಬಂದ್

ಶಿವಮೊಗ್ಗ ಸೆಪ್ಟೆಂಬರ್ 24: ತೀರ್ಥಹಳ್ಳಿ ಯಿಂದ ಉಡುಪಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169ಎ ರಂಜದಕಟ್ಟೆ ಬಳಿ ಇರುವ ಕಿರು ಸೇತುವೆ ಶಿಥಿಲಗೊಂಡ ಹಿನ್ನಲೆ ತಾತ್ಕಾಲಿಕವಾಗಿ ಸೇತುವೆಯನ್ನು ಬಂದ್ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ರಂಜದಕಟ್ಟೆ ಗ್ರಾಮದ ಬಳಿಯ ಸುಮಾರು 100 ವರ್ಷಕ್ಕೂ ಹಳೆಯ ಸೇತುವೆ ಇದಾಗಿದ್ದು, ಇದನ್ನು ಇಟ್ಟಿಗೆಯಿಂದ ನಿರ್ಮಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಸೇತುವೆ ಶಿಥಿಲಗೊಂಡಿದೆ ಎಂದು ಹೇಳಲಾಗಿದೆ. ಸದ್ಯ ಸೇತುವೆ ಮೇಲೆ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ.

ರಾಷ್ಟ್ರೀಯ ಹೆದ್ದಾರಿ 169 ಎ ಗೆ ನಿರ್ಮಿಸಲಾಗಿರುವ ಸೇತುವೆ ಇದಾಗಿದ್ದು, ತೀರ್ಥಹಳ್ಳಿ- ಉಡುಪಿ ನಡುವೆ ಸಂಪರ್ಕ ಕಲ್ಪಿಸುತ್ತದೆ. ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ತಾತ್ಕಾಲಿಕವಾಗಿ ಸೇತುವೆ ಮೇಲೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.ಇನ್ನೆರಡು ದಿನಗಳಲ್ಲಿ ಸೇತುವೆ ದುರಸ್ಥಿಗೊಳಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುತ್ತೇವೆ ಎಂದು ಎನ್.ಎಚ್. ಅಧಿಕಾರಿ ನಾಗರಾಜನಾಯ್ಕ್ ತಿಳಿಸಿದ್ದಾರೆ.