LATEST NEWS
ಅಸಹಾಯಕ ಸ್ಥಿತಿಯಲ್ಲಿದ್ದ ಗರುಡ ಪಕ್ಷಿ ರಕ್ಷಣೆ
ಉಡುಪಿ ಸೆಪ್ಟೆಂಬರ್ 24: ಅಸ್ವಸ್ಥಗೊಂಡು ಅಸಹಾಯಕ ಸ್ಥಿತಿಯಲ್ಲಿ ಕಂಡು ಬಂದಿರುವ ಗರುಡ ಪಕ್ಷಿಯನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ರಕ್ಷಿಸಿ, ಆಹಾರ ಇಲ್ಲದೆ ಬಳಲಿದ್ದ ಗರುಡಕ್ಕೆ ಆಹಾರ ಒದಗಿಸಿ ಚೇತರಿಸಿಕೊಂಡ ಬಳಿಕ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಉಡುಪಿಯ ಸಿಟಿ ಬಸ್ಸು ನಿಲ್ದಾಣದಲ್ಲಿ ನಿನ್ನೆ ಬೆಳಗ್ಗಿನ ಸಮಯ ಹಾರಲಾಗದೆ ಅಸಹಾಯಕ ಸ್ಥಿತಿಯಲ್ಲಿದ್ದ ಗರುಡ ಕಂಡು ಬಂದಿದ್ದು. ಬೀದಿ ನಾಯಿಗಳು ಗರುಡ ಪಕ್ಷಿ ಮೇಲೆ ದಾಳಿ ಮಾಡುವ ಸಾಧ್ಯತೆ ಇದ್ದ ಹಿನ್ನಲೆ ಸ್ಥಳೀಯ ರಿಕ್ಷಾ ಚಾಲಕರು ಗರುಡವನ್ನು ಹಿಡಿದು ನಾಗರಿಕ ಸಮಿತಿಯ ಕಛೇರಿಗೆ ತಂದು ಒಪ್ಪಿಸಿದ್ದರು. ಆಹಾರವಿಲ್ಲದೆ ಬಳಲಿದ್ದ ಗರುಡ ಪಕ್ಷಿಗೆ ಆಹಾರ ನೀಡಿ ನಂತರ ಅದನ್ನು ಅರಣ್ಯ ಇಲಾಖೆಗೆ ನೀಡಲಾಗಿದೆ.
You must be logged in to post a comment Login