Connect with us

    FILM

    ಬ್ಲೂ ಫಿಲ್ಮ್ ನಿರ್ಮಾಣ ಪ್ರಕರಣ – ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾಗೆ ಜಾಮೀನು..!!

    ಮುಂಬೈ ಸೆಪ್ಟೆಂಬರ್ 20: ಬ್ಲೂಫಿಲ್ಮ್ ಪ್ರಕರಣದಲ್ಲಿ ಮುಂಬೈ ಪೊಲೀಸರಿಂದ ಬಂಧಿತನಾಗಿರುವ  ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಅವರಿಗೆ ಮುಂಬೈ ನ್ಯಾಯಾಲಯ ಜಾಮೀನು ನೀಡಿದೆ.


    ಅಶ್ಲೀಲ ಚಿತ್ರಗಳನ್ನು ತಯಾರಿಸಿದ ಮತ್ತು ಕೆಲವು ಆ್ಯಪ್‌ಗಳ ಮೂಲಕ ಅವುಗಳನ್ನು ಬಿತ್ತರಿಸಿದ ಆರೋಪದ ಮೇಲೆ ರಾಜ್‌ಕುಂದ್ರಾ ಅವರನ್ನು ಮುಂಬೈ ಪೊಲೀಸರು ಜುಲೈ 20ರಂದು ಬಂಧಿಸಿದ್ದರು. ಪ್ರಕರಣದಲ್ಲಿ ಕುಂದ್ರಾ ವಿರುದ್ಧ ಸಾಕಷ್ಟು ಸಾಕ್ಷ್ಯಗಳು ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದರು. ಗುರುವಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 1,400 ಪುಟಗಳ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು

    ಇದೀಗ ಮುಂಬೈ ಕೋರ್ಟ್ ರಾಜ್‌ ಕುಂದ್ರಾ ಅವರ ಜೊತೆಗೇ ಪ್ರಕರಣದಲ್ಲಿ ಆರೋಪಿಯಾಗಿದ್ದ ರಿಯಾನ್‌ ಥ್ರೋಪೆ ಅವರಿಗೂ ನ್ಯಾಯಾಲಯ ಜಾಮೀನು ನೀಡಿದೆ. ಜಾಮೀನು ಪಡೆಯಲು ರಾಜ್‌ ಕುಂದ್ರಾ ಅವರು ₹50 ಸಾವಿರ ಭದ್ರತೆ ಒದಗಿಸಬೇಕು ಎಂದು ಕೋರ್ಟ್‌ ತಿಳಿಸಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *