LATEST NEWS
ಕಾಪು ಹೊಸ ಮಾರಿಗುಡಿಗೆ ಭೇಟಿ ನೀಡಿ ದೇವರ ದರ್ಶನ ಪಡೆದ ನಟಿ ಶಿಲ್ಪಾ ಶೆಟ್ಟಿ

ಉಡುಪಿ ಫೆಬ್ರವರಿ 28: ಬಾಲಿವುಡ್ ನಟಿ ಕನ್ನಡತಿ ಶಿಲ್ಪಾ ಶೆಟ್ಟಿ ಇದೀಗ ಕರಾವಳಿಯಲ್ಲಿ ಟೆಂಪಲ್ ರನ್ ನಲ್ಲಿದ್ದಾರೆ. ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಹೊಸದಾಗಿ ಜೀರ್ಣೋದ್ದಾರಿವಾಗಿರುವ ಉಡುಪಿ ಜಿಲ್ಲೆಯ ಕಾಪು ಹೊಸ ಮಾರಿಗುಡಿಗೆ ಭೇಟಿ ಕೊಟ್ಟು ಮಾರಿಯಮ್ಮನ ದರ್ಶನ ಮಾಡಿದ್ದಾರೆ.
ಹೊಸದಾಗಿ ಜೀರ್ಣೋದ್ದಾರಿಗೊಂಡ ಕಾಪುವಿನ ಹೊಸ ಮಾರಿಗುಡಿಗೆ ನಟಿ ಶಿಲ್ಪಾಶೆಟ್ಟಿ ತನ್ನ ತಾಯಿ ತಂಗಿ ಮತ್ತು ಮಕ್ಕಳ ಜೊತೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಕಾಪುವಿನಲ್ಲಿ ಹತ್ತು ದಿನಗಳ ಕಾಲ ಅದ್ಧೂರಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಹೊಸ ಮಾರಿಗುಡಿ ನೂತನ ದೇವಸ್ಥಾನದ ವೀಕ್ಷಣೆ ಮಾಡಿದ ಶಿಲ್ಪಾ ಶೆಟ್ಟಿ ಖುಷಿಗೊಂಡರು. ಮಾರಿಗುಡಿಯ ನಿರ್ಮಾಣ, ಮರದ ಕೆತ್ತನೆ, ಚಿನ್ನದ ಗದ್ದಿಗೆ ಕಂಡು ನಟಿ ಸಂತಸ ವ್ಯಕ್ತಪಡಿಸಿದರು.

ದೇಗುಲದ ಆಡಳಿತ ಮಂಡಳಿ ಮತ್ತು ವ್ಯವಸ್ಥಾಪನಾ ಮಂಡಳಿಯಿಂದ ಶಿಲ್ಪಾ ಶೆಟ್ಟಿಗೆ ಗೌರವ ಸಲ್ಲಿಸಲಾಯಿತು. ತಂಗಿ ಶಮಿತಾ ಶೆಟ್ಟಿ, ತಾಯಿ ಮತ್ತು ಅವರ ಕುಟುಂಬದ ಜೊತೆ ಬಾಲಾಲಯದಲ್ಲಿರುವ ಮಾರಿಯಮ್ಮನ ದರ್ಶನ ಮಾಡಿ ಪ್ರಸಾದ ಸ್ವೀಕಾರ ಮಾಡಿದ್ದಾರೆ.