FILM
48ರ ಪ್ರಾಯದಲ್ಲೂ ಬಿಕಿನಿ ಧರಿಸಿ ಪೋಸ್ ನೀಡಿದ ಶಿಲ್ಪಾ ಶೆಟ್ಟಿ…!!

ಮುಂಬೈ ಜೂನ್ 14: ವಯಸ್ಸು 48 ಆದರೂ ಇನ್ನೂ ಬಳಕುವ ಬಳ್ಳಿಯಂತೆ ಇರುವ ಶಿಲ್ಪಾಶೆಟ್ಟಿ, ಇತ್ತೀಚೆಗೆ ಬಿಕಿನಿಯಲ್ಲಿರುವ ಪೋಟೋ ಒಂದನ್ನು ಅಪ್ಲೋಡ್ ಮಾಡಿದ್ದು, ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ತಮ್ಮ 48ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲು ನಟಿ ಶಿಲ್ಪಾ ಶೆಟ್ಟಿ ಲಂಡನ್ಗೆ ತೆರಳಿದ್ದರು. ವಿದೇಶದಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ನಟಿಗೆ ಚಿತ್ರರಂಗದವರು, ಅಭಿಮಾನಿಗಳು ಶುಭಾಶಯ ತಿಳಿಸಿದ್ದರು. ವಯಸ್ಸು 45 ದಾಟಿದ್ದರೂ ಶಿಲ್ಪಾ ಶೆಟ್ಟಿ ಮಾತ್ರ ಯೋಗ, ವ್ಯಾಯಾಮ ಮೂಲಕ ಉತ್ತಮ ಆರೋಗ್ಯ ಮತ್ತು ಸೌಂದರ್ಯ ಕಾಪಾಡಿಕೊಂಡಿದ್ದಾರೆ.

ಇಟಲಿಯಲ್ಲಿ ಸ್ವಿಮ್ ಸೂಟ್ ತೊಟ್ಟು ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ತಾವು ಸ್ವಿಮ್ ಸೂಟ್ ತೊಟ್ಟು ನಿಂತಿರುವ ನೆಲದ ಮಹತ್ವವನ್ನು ಅವರು ಅಭಿಮಾನಿಗಳಿಗೆ ತಿಳಿಸಿದ್ದಾರೆ. 48ರ ಹರೆಯದಲ್ಲೂ 18ರ ಹುಡುಗಿಯಂತೆ ಕಾಣಿಸುವ ಶಿಲ್ಪಾ ಶೆಟ್ಟಿ ಈಗಲೂ ಪಡ್ಡೆ ಹುಡುಗರ ಹಾಟ್ ಫೆವರೇಟ್! ಇದೀಗ ಈ ಕುಡ್ಲ ಕನ್ಯೆ ಬಿಕಿನಿಯಲ್ಲಿ ಕಾಣಿಸಿಕೊಂಡು, ಹುಡುಗರ ಎದೆಗೆ ಕಿಚ್ಚು ಹಚ್ಚಿದ್ದಾರೆ!