Connect with us

  LATEST NEWS

  ಯುವ ಜನತೆಯಿಂದ ದೇಶ ಸದೃಢ : ಶೋಭಾ ಕರಂದ್ಲಾಜೆ

  ಉಡುಪಿ, ಜೂನ್ 14 : ದೇಶವನ್ನ ಆರ್ಥಿಕವಾಗಿ ಮತ್ತು ಎಲ್ಲಾ ರಂಗದಲ್ಲಿ ವಿಶ್ವದಲ್ಲೇ ಸದೃಢ ರಾಷ್ಟçವನ್ನಾಗಿರುವ ಜವಾಬ್ದಾರಿ ಇಂದಿನ ಯುವಜನರ ಮೇಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

  ಅವರು ಇಂದು ನಗರದ ಪೂರ್ಣಪ್ರಜ್ಞ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೂರ್ಣಪ್ರಜ್ಞ ಕಾಲೇಜು, ನೆಹರು ಯುವ ಕೇಂದ್ರ ಉಡುಪಿ, ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಹಾಗೂ ಎನ್.ಎಸ್.ಎಸ್ ಮಂಗಳೂರು ವಿಶ್ವವಿದ್ಯಾನಿಲಯ ಇವರ ಸಹಯೋಗದೊಂದಿಗೆ ನಡೆದ ಜಿಲ್ಲಾ ಮಟ್ಟದ ಯುವ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ದೇಶದಲ್ಲಿ ಯುವ ಶಕ್ತಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದರ ಸದ್ಬಳಕೆ ಆಗಬೇಕು, ಯುವ ಜನತೆ ಯಾವುದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದರೂ ಸಹ ಆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವಂತಾಗಬೇಕು, ತಮ್ಮ ಅಭಿವೃಧ್ದಿಯ ಜೊತೆಗೆ ದೇಶದ ಅಭಿವೃಧ್ದಿಗೂ ಕೈ ಜೋಡಿಸಬೇಕು. ಮುಂದಿನ 25 ವರ್ಷಗಳಲ್ಲಿ ದೇಶದ ಸರ್ವತೋಮುಖ ಅಭಿವೃಧ್ದಿ ಯುವಜನರಿಂದ ಸಾಧ್ಯವಾಗಲಿದ್ದು, ವಿಶ್ವದಲ್ಲಿ ಎಲ್ಲಾ ರಂಗದಲ್ಲೂ ಭಾರತವನ್ನು ಮುಂಚೂಣಿಗೆ ತರುವ ತರುವ ಮಹತ್ತರ ಜವಾಬ್ದಾರಿ ಯುವ ಜನತೆಯದ್ದಾಗಿದೆ ಎಂದರು.

   

  Share Information
  Advertisement
  Click to comment

  You must be logged in to post a comment Login

  Leave a Reply