KARNATAKA
ಪ್ರೀತಿ ಮಾಡುವುದಾಗಿ ಕರೆಸಿದ್ಳು, ಸ್ನೇಹಿತನ ಕೈಗೆ ಚೂರಿ ಕೊಟ್ಟು ಅಂಕಲ್‌ನನ್ನು ಇರಿಸಿದ್ಳು..!!
ಬೆಂಗಳೂರು: ಪ್ರೀತಿ ಮಾಡುವುದಾಗಿ ಕರೆಸಿ ಸ್ನೇಹಿತನ ಕೈಗೆ ಚೂರಿ ಕೊಟ್ಟು ವ್ಯಕ್ತಿಯನ್ನು ಯುವತಿಯೋರ್ವಳು ಇರಿಸಿದ ಘಟನೆ ನಡೆದಿದ್ದು ಸಿಲಿಕಾನ್ ಸಿಟಿ ಬೆಂಗಳೂರಿನ ಸುದ್ದಗುಂಟೆ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರೀತಿಗೆ ಯುವತಿ ಒಪ್ಪಿಕೊಂಡಿದ್ದಾಳೆ ಅಂತ ಖುಷಿಯಲ್ಲಿ ಭೇಟಿಯಾದ ಅಂಕಲ್ ಅಂಗಡಿ ವ್ಯಾಪಾರಿ ಹಿತೇಂದ್ರ ಕುಮಾರ್(59) ಚೂರಿ ಇರಿತಕ್ಕೆ ಒಳಗಾಗಿ ಈಗ ಆಸ್ಪತ್ರೆಯಲ್ಲಿ ಬೆಡ್ ಮೇಲೆ ಮಲಗಿದ್ದಾರೆ. ಜಯನಗರದಲ್ಲಿ ಬಟ್ಟೆ ಅಂಗಡಿ ನಡೆಸ್ತಿರೋ ಗಾಯಾಳು ಹಿತೇಂದ್ರ ಕುಮಾರ್ ಬಟ್ಟೆ ಅಂಗಡಿಗೆ ಕೆಲಸಕ್ಕೆ ಸೇರಿದ್ದ ಯುವತಿ ಎರಡು ಮೂರು ತಿಂಗಳು ಕೆಲಸ ಮಾಡಿ ನಂತರ ಕೆಲಸ ಬಿಟ್ಟಿದ್ದಳು. ಕಳೆದ 14ನೇ ತಾರೀಖು ಭೇಟಿಯಾಗೋಣ ಅಂತಾ ಯುವತಿಯನ್ನ ಫೋನ್ ಮಾಡಿದ್ದ ಕರೆದಿದ್ದ ಅಂಕಲ್ ಹಿತೇಂದ್ರ. ಅದೇ ರೀತಿ ಬಿಟಿಎಂ ಲೇಔಟ್ ನ ಪಾರ್ಕ್ ವೊಂದರಲ್ಲಿ ಯುವತಿಯನ್ನ ಭೇಟಿಯಾಗಿದ್ದ ಇದೇ ವೇಳೆ ಯುವತಿಗೆ ತನ್ನ ಪ್ರೀತಿಯನ್ನ ಹೇಳಿಕೊಂಡಿದ್ದ . ಆಗ ಯುವತಿ ಕೂಡ ಆತನ ಪ್ರೀತಿಗೆ ಒಕೆ ಅಂತಾ ಹೇಳಿದ್ದಾಳಂತೆ. ಇದೇ ಖುಷಿಲಿ ಮರುದಿನ ಯುವತಿಯನ್ನು ಅದೇ ಪಾರ್ಕಿನಲ್ಲಿ ಮತ್ತೆ ಭೇಟಿಗೆ ಕರೆದಿದ್ದ ಅಂಕಲ್. ಅದೇ ಬೆಂಚ್ ಮೇಲೆ ಕೂತು ಮಾತುಕತೆ ಮಾಡುತ್ತಿದ್ದ ವೇಳೆ ಏಕಾಏಕಿ ಚಾಕು ಸಮೇತ ಎಂಟ್ರಿ ಕೊಟ್ಟಿದ್ದ ಯುವತಿ ಸ್ನೇಹಿತ. ಈ ವೇಳೆ ಹಿತೇಂದ್ರ ಕುಮಾರ್ ಹೊಟ್ಟೆ, ಬೆನ್ನು ಸೇರಿ ಕೆಲವೆಡೆ ಇರಿದು ಪರಾರಿಯಾಗಿದ್ದ. ತೀವ್ರಗಾಯಗೊಂಡ ಅಂಕಲ್ ಆಸ್ಪತ್ರೆ ಸೇರಿದ್ದ. ತಾನು ಪ್ರೀತಿಸ್ತಿದ್ದ ಯುವತಿ ಹಾಗೂ ಆಕೆಯ ಸ್ನೇಹಿತ ಸೇರಿಕೊಂಡು ಉದ್ದೇಶಪೂರ್ವಕವಾಗಿ ಕೊಲೆ ಯತ್ನ ಮಾಡಿದ್ದಾರೆ ಅಂತಾ ದೂರು ದಾಖಲು ಮಾಡಿದ್ದಾರೆ. ಸದ್ಯ ಆರೋಪಿ ಸಿದ್ದು ಮತ್ತು ಆತನ ಸ್ನೇಹಿತೆಯನ್ನ ಬಂಧಿಸಿರುವ ಸುದ್ದ ಗುಂಟೆ ಪೊಲೀಸರು ಪ್ರಕರಣದಲ್ಲಿ ಬೇರೆ ವಿಚಾರ ಇರುವ ಶಂಕೆ ವ್ಯಕ್ತಪಡಿಸಿದ್ದಾರೆ.
You must be logged in to post a comment Login