LATEST NEWS
ರೈಲಿನಲ್ಲಿ 20 ರೂಪಾಯಿ ಚಹಾಕ್ಕೆ 50 ರೂಪಾಯಿ ಟ್ಯಾಕ್ಸ್….!!

ನವದೆಹಲಿ: ಜಿಎಸ್ ಟಿ ಬಂದ ಮೇಲೆ ಬಹುತೇಕ ಎಲ್ಲಾ ಸೇವೆಗಳಿಗೂ ಟ್ಯಾಕ್ಸ್ ಅನ್ವಯವಾಗುತ್ತಿದ್ದು, ಇದೀಗ ಶತಾಬ್ದಿ ರೈಲಿನಲ್ಲಿ ತೆಗೆದುಕೊಂಡ ಚಹಾಕ್ಕೆ ಪ್ರಯಾಣಿಕನೊಬ್ಬ 50 ರೂಪಾಯಿ ಟ್ಯಾಕ್ಸ್ ಕಟ್ಟಿದ್ದಾನೆ.
ಜೂನ್ 28 ರಂದು ದೆಹಲಿಯಿಂದ ಭೋಪಾಲ್‍ಗೆ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ರೈಲಿನಲ್ಲಿ ಕೇವಲ ಒಂದು ಗ್ಲಾಸ್ ಚಹಾ ಕುಡಿಯಲು 70 ರೂ. ಖರ್ಚು ಮಾಡಿದ್ದಾನೆ. ಚಹಾ ಕೇವಲ 20ರೂ ಆಗಿದ್ದರೆ, ಅದರ ಸೇವಾಶುಲ್ಕವೇ 50ರೂ. ಆಗಿರುವುದು ಕಂಡು ಎಲ್ಲರಿಗೂ ಶಾಕ್ ಆಗಿದೆ.


ಸಾಂದರ್ಭಿಕ ಚಿತ್ರ
ಪ್ರಯಾಣಿಕರು ರೈಲಿನ ಟಿಕೆಟ್ ಬುಕ್ ಮಾಡುವಾಗಲೇ ತಮಗೆ ಬೇಕಾದ ಆಹಾರವನ್ನು ಆರ್ಡರ್ ಮಾಡದೇ, ಪ್ರಯಾಣಿಸುವ ವೇಳೆ ಏನನ್ನಾದರೂ ಆರ್ಡರ್ ಮಾಡಿದರೆ, ಅವರು 50 ರೂ. ಸೇವಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಸುತ್ತೋಲೆಯನ್ನು 2018ರಲ್ಲಿಯೇ ಹೊರಡಿಸಲಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.
ಸದ್ಯ ಚಹಾದ ಬಿಲ್ ಸಾಮಾಜಿಕ ಜಾಲತಾಣಲದಲ್ಲಿ ವೈರಲ್ ಆಗಿದೆ.