Connect with us

    KARNATAKA

    ಗುಂಡಿಕ್ಕಿ ಗೋವುಗಳ ಸರಣಿ ಹತ್ಯೆ ಪ್ರಕರಣದ ಸಂತ್ರಸ್ಥರ ಮನೆಗಳಿಗೆ ಭೇಟಿ ನೀಡಿ ಧೈರ್ಯ ತುಂಬಿದ ಶರಣ್ ಪಂಪ್‌ವೆಲ್..!

    ಉಡುಪಿ ಜಿಲ್ಲೆ ಕೊಲ್ಲೂರಿನ ಬೆಳ್ಳಾಲ ಸಮೀಪ ನಾಲ್ಕು ದಿನಗಳ ಹಿಂದೆ ಬಂದೂಕಿನಿಂದ ಗುಂಡು ಹಾರಿಸಿ ನಡೆದ ಗೋವುಗಳ ಸರಣಿ ಹತ್ಯೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ಗೋವುಗಳನ್ನು ಕಳಕೊಂಡ ಸಂತ್ರಸ್ಥರ ಮನೆಗಳಿಗೆ ವಿಹೆಚ್‌ಪಿ ನಾಯಕ ಶರಣ್ ಪಂಪ್‌ವೆಲ್ ನೇತ್ರತ್ವದ ನಿಯೋಗ ಭೇಟಿ ನೀಡಿ ಧೈರ್ಯ ತುಂಬಿತು.

    ಉಡುಪಿ : ಉಡುಪಿ ಜಿಲ್ಲೆ ಕೊಲ್ಲೂರಿನ ಬೆಳ್ಳಾಲ ಸಮೀಪ ನಾಲ್ಕು ದಿನಗಳ ಹಿಂದೆ ಬಂದೂಕಿನಿಂದ ಗುಂಡು ಹಾರಿಸಿ ನಡೆದ ಗೋವುಗಳ ಸರಣಿ ಹತ್ಯೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ಗೋವುಗಳನ್ನು ಕಳಕೊಂಡ ಸಂತ್ರಸ್ಥರ ಮನೆಗಳಿಗೆ ವಿಹೆಚ್‌ಪಿ ನಾಯಕ ಶರಣ್ ಪಂಪ್‌ವೆಲ್ ನೇತ್ರತ್ವದ ನಿಯೋಗ ಭೇಟಿ ನೀಡಿ ಧೈರ್ಯ ತುಂಬಿತು.

    ಇದಕ್ಕೂ ಮುನ್ನ ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೈಂದೂರು ಪ್ರಖಂಡದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

    ಘಟನೆ ಬಳಿಕ ತಲೆಮರೆಸಿಕೊಂಡ ಆರೋಪಿ ನರಸಿಂಹ ಕುಲಾಲ್ ನನ್ನು ತಕ್ಷಣ ಬಂಧಿಸಲು ಕೊಲ್ಲೂರು ಪೊಲೀಸ್ ಸ್ಟೇಷನ್ ಗೆ ಹೋಗಿ ಒತ್ತಾಯಿಸಲಾಯಿತು ಹಾಗೂ ಠಾಣಾಧಿಕಾರಿಯವರೆಗೆ ಮನವಿಯನ್ನು ನೀಡಲಾಯಿತು.

    ಕೊಲ್ಲೂರಿನ ಬೆಳ್ಳಾಲ ಅಂಗಡಿಜೆಡ್ಡುವಿನಲ್ಲಿ ಮೇಯಲು ಬಿಟ್ಟಿದ್ದ ಗುಲಾಬಿ ಅವರಿಗೆ ಸೇರಿದ್ದ ದನ ಹಾಗೂ ಇತರ ದನಗಳಿಗೆ ಆರೋಪಿ ನರಸಿಂಹ ಕೋವಿಯಿಂದ ಶೂಟ್‌ ಮಾಡಿದ್ದರು.

    ಪರಿಣಾಮ ದನ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದರೆ ಇತರ ಮೂರು ದನಗಳಿಗೆ ಗಾಯಗಳಾಗಿತ್ತು ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿತ್ತು.

    ನರಸಿಂಹ ಅವರನ್ನು ವಿಚಾರಿಸಿದಾಗ ದನಕ್ಕೆ ಹೊಡೆದ ಹಾಗೆ ನಿಮಗೂ ಹೊಡೆಯುತ್ತೇನೆ ಎಂದು ಆರೋಪಿ ನ ಬೆದರಿಸುತ್ತಿರುವುದಾಗಿ ದೂರಿನಲ್ಲಿ ಉಲ್ಲೇಖವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply