KARNATAKA
ಮಂತ್ರಾಲಯಕ್ಕೆ ಮಹಾಶಕ್ತಿ ತುಂಬಿದ’ ಶಕ್ತಿ’ ಯೋಜನೆ: ರಾಯರ ಮಠಕ್ಕೆ 4 ತಿಂಗಳಲ್ಲಿ 13 ಕೋ.ಆದಾಯ..!
ಕರ್ನಾಟಕ ರಾಜ್ಯದ ಶಕ್ತಿ ಯೋಜನೆಯಿಂದ ಯಾರಿ ಲಾಭ ಆಗಿದೆ ಅಂತ ಗೊತ್ತಿಲ್ಲ ಆದ್ರೆ ಧಾರ್ಮಿಕ ಕ್ಷೇತ್ರಗಳಿಗೆ ಮಾತ್ರ ಭಾರಿ ಆದಾಯ ತಂದು ಕೊಟ್ಟಿದೆ.
ರಾಯಚೂರು : ಕರ್ನಾಟಕ ರಾಜ್ಯದ ಶಕ್ತಿ ಯೋಜನೆಯಿಂದ ಯಾರಿ ಲಾಭ ಆಗಿದೆ ಅಂತ ಗೊತ್ತಿಲ್ಲ ಆದ್ರೆ ಧಾರ್ಮಿಕ ಕ್ಷೇತ್ರಗಳಿಗೆ ಮಾತ್ರ ಭಾರಿ ಆದಾಯ ತಂದು ಕೊಟ್ಟಿದೆ.
ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಕಳೆದ 34 ದಿನಗಳಲ್ಲಿ ದಾಖಲೆಯ ಆದಾಯ ಹರಿದು ಬಂದಿದೆ.
ಇದೇ ವೇಳೆ ಶ್ರೀ ರಾಘವೇಂದ್ರಸ್ವಾಮಿಗಳ 352 ನೇ ಆರಾಧನಾ ಮಹೋತ್ಸವವು ಆ.29 ರಿಂದ ಸೆ.4 ರವರೆಗೆ ನಡೆದಿತ್ತು.
ಈ ವೇಳೆ ಲಕ್ಷಾಂತರ ಭಕ್ತರು ಶ್ರೀಮಠದ ದರ್ಶನ ಪಡೆದರು.
ಸಾಗರದಂತೆ ಹರಿದು ಬಂದ ಭಕ್ತರ ಉದಾರ ದೇಣಿಗೆಯಿಂದ ಶ್ರೀಮಠದ ಆದಾಯ ದಾಖಲೆ ಸೃಷ್ಟಿಸಿದೆ.
ಕರ್ನಾಟಕ ರಾಜ್ಯ ಸರ್ಕಾರದ ಮಹತ್ವದ ಶಕ್ತಿ ಯೋಜನೆ ಮಂತ್ರಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರು ಹಾಗೂ ಭಕ್ತರ ಸಂಖ್ಯೆ ಗಣನೀಯ ಹೆಚ್ಚುವಂತೆ ಮಾಡಿದೆ.
ರಜಾ ದಿನಗಳಷ್ಟೇ ಅಲ್ಲದೆ ಸಾಮಾನ್ಯ ದಿನಗಳಲ್ಲೂ ಸಹಸ್ರಾರು ಭಕ್ತರು ರಾಯರ ದರ್ಶನಕ್ಕೆ ದೌಡಾಯಿಸುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿದೆ.
ಶ್ರೀ ಮಠದ ಹುಂಡಿಗಳಲ್ಲಿ ಕಳೆದ 34 ದಿನಗಳಲ್ಲಿ ಸಂಗ್ರಹವಾದ ಕಾಣಿಕೆಯನ್ನು ಸೋಮವಾರ ಹಾಗೂ ಮಂಗಳವಾರ ಎಣಿಸಲಾಯಿತು.
ಮೊದಲ ಬಾರಿ ಗರಿಷ್ಠ 3,82,59,839 ರೂ. ಕಾಣಿಕೆ ಸಂಗ್ರಹವಾಗಿರುವುದು ಪತ್ತೆಯಾಗಿದೆ.
ನಗದು ಜತೆಗೆ 53 ಗ್ರಾಂ ಚಿನ್ನ ಮತ್ತು 1200 ಗ್ರಾಂ ಬೆಳ್ಳಿಯನ್ನೂ ಭಕ್ತರು ರಾಯರಿಗೆ ಅರ್ಪಿಸಿದ್ದಾರೆ.
ಜೂನ್‌ನಲ್ಲಿ2,89,96,295 ರೂ., ಜುಲೈನಲ್ಲಿ3,76,67,469 ರೂ., ಆಗಸ್ಟ್‌ನಲ್ಲಿ 2,35,62,719 ರೂ. ಕಾಣಿಕೆ ಸಂದಾಯವಾಗಿತ್ತು.
ಕಳೆದ ನಾಲ್ಕು ತಿಂಗಳಲ್ಲಿ ಬರೋಬ್ಬರಿ 12,84,86,322 ರೂ. ಕಾಣಿಕೆ ಮಂತ್ರಾಲಯ ಮಠದ ಹುಂಡಿ ಸೇರಿದೆ.
ಕಳೆದ ನಾಲ್ಕು ತಿಂಗಳಲ್ಲಿ ಅತೀ ಹೆಚ್ಚು ಕಾಣಿಕೆ ಈ ತಿಂಗಳ ಹುಂಡಿಯ ಎಣಿಕೆ ವೇಳೆ ಪತ್ತೆಯಾಗಿದೆ. ಶ್ರೀ ಮಠದ ಇತಿಹಾಸದಲ್ಲಿಯೇ ಮೊದಲ ಬಾರಿ ಇಷ್ಟೊಂದು ಗರಿಷ್ಠ ಆದಾಯ ಹರಿದು ಬಂದಿದೆ.