Connect with us

  LATEST NEWS

  ಮೂರು ದಿನಗಳ ಒಳಗೆ ಸಮಸ್ಯೆ ಸರಿಪಡಿಸಿ ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದರು 5 ಶಾಸಕರೊಂದಿಗೆ ಧರಣಿ – ಕೋಟ ಶ್ರೀನಿವಾಸ ಪೂಜಾರಿ ವಾರ್ನಿಂಗ್

  ಉಡುಪಿ ಸೆಪ್ಟೆಂಬರ್ 27:ಮುಷ್ಕರ ನಿರತ ಕಟ್ಟಡ ಸಾಮಾಗ್ರಿ ಸಾಗಾಟ ಮಾಡುವ ಲಾರಿ ಚಾಲಕರ ಸಮಸ್ಯೆಗಳನ್ನು ಮೂರು ದಿನಗಳ ಒಳಗೆ ಉಡುಪಿ ಜಿಲ್ಲಾಡಳಿತ ಸರಿಪಡಿಸದೇ ಇದ್ದರೆ ಎಲ್ಲಾ ಲಾರಿಗಳ ಸಹಿತವಾಗಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಉಡುಪಿ ಜಿಲ್ಲೆಯ ಐದು ಮಂದಿ ಶಾಸಕರು ಮತ್ತು ನಾನು ಧರಣಿ ಕುಳಿತುಕೊಳ್ಳುತ್ತೇವೆ” ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಫೂಜಾರಿ ಸರಕಾರವನ್ನು ಎಚ್ಚರಿಸಿದ್ದಾರೆ.


  ಉಡುಪಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು “ಇದು ಲಾರಿ ಮಾಲಕರಿಂದ ಆಗಿರುವ ಸಮಸ್ಯೆ ಅಲ್ಲ ಬದಲಾಗಿ ಸರಕಾರ ಮತ್ತು ಜಿಲ್ಲಾಡಳಿತದ ನೀತಿಗಳಿಂದಾಗಿ ಆಗಿರುವ ಸಮಸ್ಯೆ. ಜಿಲ್ಲಾಡಳಿತ ಕಾನೂನಿನ ತೊಡಕುಗಳನ್ನು ನಿವಾರಿಸಿಕೊಂಡು ಮೂರು ದಿನಗಳ ಒಳಗಾಗಿ ಈ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು. ಮಾತ್ರವಲ್ಲದೇ ಇದರಿಂದಾಗಿ ಸಾರ್ವಜನಿಕರ ಜನಜೀವನದ ಮೇಲೆ ಆಗುತ್ತಿರುವ ಕೆಟ್ಟ ಪರಿಣಾಮಗಳನ್ನು ತಪ್ಪಿಸಬೇಕು. ಉಡುಪಿ ಜಿಲ್ಲೆಯಲ್ಲಿ ಸುಮಾರು 5 ಸಾವಿರ ಲಾರಿಗಳಲ್ಲಿ ಸುಮಾರು 35 ಸಾವಿರ ಕುಟುಂಬಗಳು ಅವಲಂಬಿತವಾಗಿವೆ. ಈ ಎಲ್ಲಾ ಕಾರ್ಮಿಕರ ಬದುಕು ಈಗ ಬೀದಿಗೆ ಬಂದಿದೆ.

  ಜಿಲ್ಲೆಯ ಒಳಗೆ ಮರಳು ಸಾಗಾಟವನ್ನು ಯಾವುದೇ ಕಾರಣಕ್ಕೂ ತಡೆಯಬಾರದು ಮಾತ್ರವಲ್ಲದೇ ಮರಳು ಜಿಲ್ಲೆಯಿಂದ ಹೊರ ಹೋಗದಂತೆ ಅಧಿಕಾರಿಗಳು ನಿಗಾ ವಹಿಸಬೇಕು. ಇಂತಹ ಅಂಧಾ ಕಾನೂನು ನನ್ನು ಸಹಿಸಲು ಸಾಧ್ಯವಿಲ್ಲ. ಕಾನೂನಿನಲ್ಲಿರುವ ಗೊಂದಲ ಸರಿಪಡಿಸಿ ಮತ್ತು ಎಲ್ಲವನ್ನೂ ನಿಯಮಬದ್ದವಾಗಿ ಮಾಡಿಕೊಳ್ಳಲು 6 ತಿಂಗಳ ಕಾಲಾವಕಾಶ ನೀಡಬೇಕು. ಇದು ಇಲಾಖೆಯ ಸಮಸ್ಯೆ ಹೊರತು ಲಾರಿ ಯವರಿಂದ ಉದ್ಭವಿಸಿದ ಸಮಸ್ಯೆ ಅಲ್ಲ” ಎಂದರು.

  Share Information
  Advertisement
  Click to comment

  You must be logged in to post a comment Login

  Leave a Reply