LATEST NEWS
ಜುಲೈ 17 ರಿಂದ 5 ದಿನಗಳ ಕಾಲ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಅವಕಾಶ..!!
ತಿರುವನಂತಪುರಂ: ಕೊನೆಗೂ ಅಯ್ಯಪ್ಪನ ದರ್ಶನಕ್ಕೆ ಅವಕಾಶ ದೊರೆತಿದ್ದು, ತಿಂಗಳ ಪೂಜೆ ಪ್ರಯುಕ್ತ ಜುಲೈ 17 ರಿಂದ ಜುಲೈ 21 ರವರೆಗೆ ಐದು ದಿನಗಳ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕೊರೊನಾ ಎರಡನೇ ಅಲೆ ಪ್ರಾರಂಭವಾದ ನಂತರ ಶಬರಿಮಲೆಗೆ ಭಕ್ತರು ಪ್ರವೇಶವನ್ನು ನಿಷೇಧಿಸಲಾಗಿತ್ತು. ಈಗ ಕೊರೊನಾ ಪ್ರಕರಣಗಳು ಇಳಿಕೆಯಲ್ಲಿರುವ ಹಿನ್ನಲೆ ಜುಲೈ 17ರಿಂದ ಜುಲೈ 21ರವರೆಗೆ ಅಯ್ಯಪ್ಪ ಸ್ವಾಮಿ ದೇವಾಯಲ ತೆರೆದಿರಲಿದೆ. 48 ಗಂಟೆಗಳ ಅವಧಿಯಲ್ಲಿ ಕರೊನಾ ನೆಗೆಟಿವ್ ಬಂದಿರುವ ವರದಿ ಇರುವ ಭಕ್ತಾದಿಗಳು ಮತ್ತು ಎರಡು ಕರೊನಾ ಲಸಿಕೆ ಪಡೆದಿರುವ ಭಕ್ತಾದಿಗಳಿಗೆ ಮಾತ್ರ ದೇವರ ದರ್ಶನ ಪಡೆಯಲು ಅವಕಾಶವಿರಲಿದೆ ಎಂದು ದೇವಸ್ಥಾನದ ಮಂಡಳಿ ತಿಳಿಸಿದೆ.
ಪ್ರತಿದಿನ ಗರಿಷ್ಠ 5 ಸಾವಿರ ಭಕ್ತಾದಿಗಳು ದೇವರ ದರ್ಶನ ಪಡೆಯಬಹುದು. ಆನ್ಲೈನ್ ಬುಕ್ಕಿಂಗ್ ಮಾಡಿದವರಿಗೆ ಮಾತ್ರ ಈ ಅವಕಾಶ ಸಿಗಲಿದೆ. ದೇವಸ್ಥಾನದ ಆವರಣದಲ್ಲಿ ಮಾಸ್ಕ್ ಹಾಕಿಕೊಳ್ಳುವುದು ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ ಎಂದು ತಿಳಿಸಲಾಗಿದೆ.