Connect with us

    LATEST NEWS

    ಬಂಟ್ವಾಳ : ಇನ್ಸ್ಟಾಗ್ರಾಂ ಫ್ರೆಂಡ್ ನಿಂದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ…!!

    ಬಂಟ್ವಾಳ ಡಿಸೆಂಬರ್ 09: ಅಪ್ರಾಪ್ತ ಬಾಲಕನೊಬ್ಬ ಇನ್ಸ್ಟಾಗ್ರಾಂ ನಲ್ಲಿ ಪರಿಚಯವಾದ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಸಂತ್ರಸ್ತ ಬಾಲಕಿ ನೀಡಿದ ದೂರಿನಂತೆ ಅಪ್ರಾಪ್ತ ಬಾಲಕನನ್ನು ಪೊಲೀಸು ಬಂಧಿಸಿದ್ದಾರೆ.


    ಹತ್ತನೇ ತರಗತಿಯಲ್ಲಿ ಓದುತ್ತಿರುವ ಸಂತ್ರಸ್ತೆ ಬಾಲಕಿಗೆ ಇನ್ಸ್ಸ್ಟಾಗ್ರಾಂನಲ್ಲಿ ಬಾಲಕ ಪರಿಚಯವಾಗಿದ್ದಾನೆ. ಈ ಪರಿಚಯ ಲವ್ ಗೆ ತಿರುಗಿದ್ದು, ಬಳಿಕ ಬಾಲಕ ಆಗಾಗ ಸಂತ್ರಸ್ತೆಯ ಮನೆಗೆ ಭೇಟಿ ಕೊಡುತ್ತಿದ್ದನು ಎಂದು ಹೇಳಲಾಗಿದೆ. ಈ ನಡುವೆ ಒಂದು ದಿನ ಬಾಲಕ ಸಂತ್ರಸ್ತೆಗೆ ಕರೆ ಮಾಡಿ ರಾತ್ರಿ ಸಂತ್ರಸ್ತೆಯ ಮನೆಗೆ ಬಂದಿದ್ದು, ಬಳಿಕ ಆಕೆ ಆತನ ಜೊತೆ ಸ್ಕೂಟರ್‌ನಲ್ಲಿ ತೆರಳಿದ್ದಾಳೆ. ಅಂದು ಬಾಲಕ ಸಂತ್ರಸ್ತೆಗೆ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಆಕೆಯನ್ನು ಮನೆಗೆ ಬಿಟ್ಟು ಹೋಗಿದ್ದಾನೆ. ಈ ಬಗ್ಗೆ ಸಂತ್ರಸ್ತ ಬಾಲಕಿಯ ದೂರಿನಂತೆ, ಬಾಲಕನನ್ನು ಬಾಲನ್ಯಾಯ ಮಂಡಳಿಯ ಎದುರು ಹಾಜರುಪಡಿಸಿ, ರಿಮಾಂಡ್ ಹೋಂಗೆ ಆದೇಶಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply