ಹಲ್ಲು ನೋವಿನ ಚಿಕಿತ್ಸೆಗೆ ಬಂದ ಯುವತಿ ಲೈಂಗಿಕ ಕಿರುಕುಳ ನೀಡಿದ ಡಾಕ್ಟರ್

ಬೆಳ್ತಂಗಡಿ ಜನವರಿ 30: ಹಲ್ಲು ನೋವಿನ ಚಿಕಿತ್ಸೆಗಾಗಿ ಬಂದ ಯುವತಿಗೆ ವೈದ್ಯನೇ ಲೈಂಗಿಕ ಕಿರುಕುಳ ನೀಡದ ಘಟನೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಬೆಳ್ತಂಗಡಿಯ ಯುವತಿ ಬೆಳಿಗ್ಗೆ ಆಸ್ಪತ್ರೆಗೆ ತೆರಳಿ ಹಲ್ಲಿನ ವೈದ್ಯರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಲೈಂಗಿಕ ಕಿರುಕುಳ ನೀಡಿದ ದಂತ ವೈದ್ಯನನ್ನು ಡಾ.ಸುಧಾಕರ್ ಎಂದು ಗುರುತಿಸಲಾಗಿದ್ದು, ಈತನ ವಿರುದ್ಧ ಬೆಳ್ತಂಗಡಿ ಪೋಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354, 354 A(1) ರಂತೆ ಪ್ರಕರಣ ದಾಖಲಿಸಲಾಗಿದೆ.

ಮೂಲತಃ ನೆಲ್ಯಾಡಿಯವನಾದ ಸುಧಾಕರ್ ವಿಟ್ಟ ಮತ್ತು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಭಾರ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಕೋರ್ಟ್ ಆತನಿಗೆ ಜಾಮೀನು ನೀಡಿದೆ.