Connect with us

    LATEST NEWS

    ಕೇರಳಕ್ಕೆ ಕಾಲಿಟ್ಟ ಕರೋನಾ ವೈರಸ್ ಆತಂಕದಲ್ಲಿ ಕರಾವಳಿ…!

    ಕೇರಳಕ್ಕೆ ಕಾಲಿಟ್ಟ ಕರೋನಾ ವೈರಸ್ ಆತಂಕದಲ್ಲಿ ಕರಾವಳಿ…!

    ಕೇರಳ ಜನವರಿ 30: ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಭೀಕರ ಕರೋನಾ ವೈರಸ್ ಈಗ ಭಾರತಕ್ಕೂ ಕಾಲಿಟ್ಟಿದ್ದು, ಕರೋನಾ ವೈರಸ್ ನ ಮೊದಲ ಪ್ರಕರಣ ಕೇರಳದಲ್ಲಿ ಪತ್ತೆಯಾಗಿದೆ.

    ಕೇರಳದಿಂದ ವುಹಾನ್ ನಗರಕ್ಕೆ ವ್ಯಾಸಂಗಕ್ಕೆಂದು ತೆರಳಿದ್ದ ವಿದ್ಯಾರ್ಥಿ, ಕೊರೊನಾ ವೈರಸ್‌‌ನಿಂದ ವುಹಾನ್ ಅಸ್ತವ್ಯಸ್ತಗೊಂಡ ಕಾರಣ ತಾಯ್ನಾಡಿಗೆ ಮರಳಿದ್ದರು. ಚೀನಾದಿಂದ ಕೇರಳಕ್ಕೆ ಬಂದ ವಿದ್ಯಾರ್ಥಿಯಲ್ಲಿ ವೈರಸ್​ ಸೋಂಕು ಇರುವುದು ಪ್ರಯೋಗಾಲಯದ ವರದಿಯಿಂದ ಪತ್ತೆಯಾಗಿದೆ. ಚೀನಾದ ವುವಾನ್​​ನಲ್ಲಿ ಈ ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿದ್ದ. ವೈರಸ್​ ಹರಡದಂತೆ ಎಲ್ಲ ರೀತಿಯ ಎಚ್ಚರಿಕೆ ವಹಿಸುವಂತೆ ಕೇರಳಕ್ಕೆ ಕೇಂದ್ರ ಸರ್ಕಾರ ಸೂಚಿಸಿದೆ.

    ರೋಗಪೀಡಿತ ವಿದ್ಯಾರ್ಥಿಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ರೋಗಿಯ ಸ್ಥಿತಿ ಸ್ಥಿರವಾಗಿದ್ದು, ತೀವ್ರ ನಿಗಾ ವಹಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

    ಈ ನಡುವೆ ಕೇರಳದಲ್ಲಿ ಕರೋನಾ ವೈರಸ್ ಪತ್ತೆ ಹಿನ್ನಲೆ ಕೇರಳ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೇರಳ ಕರ್ನಾಟಕ ಗಡಿ ಪ್ರದೇಶಗಳಲ್ಲಿ ದಕ್ಷಿಣಕನ್ನಡ ಹಾಗೂ ಮಡಿಕೇರಿ ಸೇರಿದ್ದು, ಜಿಲ್ಲೆಯಿಂದ ಕೇರಳಕ್ಕೆ ಸಂಚರಿಸುವ ಬಸ್ಸು ಹಾಗೂ ವಿಮಾನಗಳಲ್ಲಿ ತೀವ್ರ ಎಚ್ಚರಿಕೆ ವಹಿಸಲಾಗಿದೆ.

    ಇದುವರೆಗೆ ಚೀನಾದಲ್ಲಿ ಇದುವರೆಗೂ 170 ಮಂದಿ ಮೃತಪಟ್ಟಿದ್ದು, 1700 ಮಂದಿಗೆ ಸೋಂಕು ತಗುಲಿ ಆಸ್ಪತ್ರೆಯಲ್ಲಿದ್ದಾರೆ. ಚೀನಾದ ದುಬೇ ನಗರ ಒಂದರಲ್ಲೇ 37 ರಿಂದ 38 ಮಂದಿ ಮೃತಪಟ್ಟಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply