LATEST NEWS
ಬಾಲಕಿಗೆ ಲೈಂಗಿಕ ಕಿರುಕುಳ, ಆರೋಪಿ ವೃದ್ದ ಪೋಲಿಸ್ ಬಲೆಗೆ

ಬಾಲಕಿಗೆ ಲೈಂಗಿಕ ಕಿರುಕುಳ, ಆರೋಪಿ ವೃದ್ದ ಪೋಲಿಸ್ ಬಲೆಗೆ
ಮಂಗಳೂರು,ನವೆಂಬರ್ 01: ಏಳು ವರ್ಷದ ಬಾಲಕಿಯೋರ್ವಳಿಗೆ ವೃದ್ದನೋರ್ವ ಲೈಂಗಿಕ ಕಿರುಕುಳ ನೀಡಿದ ಘಟನೆ ಮಂಗಳೂರು ಉಳ್ಳಾಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉಳ್ಳಾಲದ ಉಚ್ಚಿಲದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ಏಳು ವರ್ಷದ ಬಾಲಕಿ ಖರೀದಿಗಾಗಿ ಅಂಗಡಿಗೆ ಬಂದ ಸಮಯದಲ್ಲಿ ಅಂಗಡಿ ಮಾಲಕ ಬಾಲಕಿಗೆ ಚಾಕಲೇಟಿನ ಆಮೀಷ ನೀಡಿ ಬಾಲಕಿಯನ್ನು ಲೈಂಗಿಕವಾಗಿ ಬಳಸಲು ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೋಲಿಸರು ಅಂಗಡಿ ಮಾಲಿಕ ರಝಾಕ್ (68) ನನ್ನು ಬಂಧಿಸಿದ್ದು, ಪೋಸ್ಕೋ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ.