DAKSHINA KANNADA
ಸರ್ಕಾರದ ಅನ್ನಭಾಗ್ಯದ ತೊಗರಿ, ತಿಂದರೆ ಮಾತ್ರ ಲಗಾಡಿ
ಅನ್ನಭಾಗ್ಯದ ತೊಗರಿ, ತಿಂದರೆ ಮಾತ್ರ ಲಗಾಡಿ …
ಪುತ್ತೂರು, ನವಂಬರ್ 01: ರಾಜ್ಯ ಸರಕಾರ ಅನ್ನಭಾಗ್ಯದ ಹೆಸರಿನಲ್ಲಿ ಕಳಪೆ ಗುಣಮಟ್ಟದ ಅಕ್ಕಿ , ತೊಗರಿ ಬೇಳೆಗಳನ್ನು ನೀಡುತ್ತಿರುವುದು ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲೂ ಕಂಡು ಬರುವ ಸಂಗತಿಯಾಗಿದೆ. ಇದೀಗ ಕಳೆಪೆ ಗುಣಮಟ್ಟದ ತೊಗರಿ ಬೇಳೆಯ ಜೊತೆಗೆ ಅವಧಿ ಮುಗಿದ ತೊಗರಿ ಬೇಳೆಗಳನ್ನೂ ಅನ್ನಭಾಗ್ಯದ ಹೆಸರಿನಲ್ಲಿ ಬಡವರಿಗೆ ವಿತರಿಸಲಾಗುತ್ತಿದೆ.
ಅವಧಿ ಮೀರಿದ ತೊಗರಿ ಬೇಳೆಗಳನ್ನು ವಿತರಿಸಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿದ್ದರೂ, ಸರಕಾರ ಹಾಗೂ ಅಧಿಕಾರಿಗಳು ಇದಕ್ಕೆ ಹಲವು ಸಬೂಬುಗಳನ್ನು ನೀಡಿ ತಪ್ಪಿಸಿಕೊಳ್ಳುವ ಪ್ರಯತ್ನವನ್ನೂ ನಡೆಸಿವೆ. ಆದರೆ ಇದೀಗ ಪುತ್ತೂರಿನ ವ್ಯಕ್ತಿಯೋರ್ವರು ಅನ್ನಭಾಗ್ಯದ ಮೂಲಕ ನೀಡಲಾದ ತೊಗರಿಬೇಳೆಯ ಗುಣಮಟ್ಟವನ್ನು ತಾನೊಬ್ಬನೇ ನೋಡುವುದು ಬೇಡ, ಎಲ್ಲರೂ ನೋಡಲಿ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.
ಈ ಕಾರಣಕ್ಕಾಗಿ ಆ ವ್ಯಕ್ತಿ ಪುತ್ತೂರಿನ ಬನ್ನೂರು ಸೊಸೈಟಿಯಿಂದ ತಂದ ಅನ್ನಭಾಗ್ಯದ ತೊಗರಿಬೇಳೆಯ ಪ್ಯಾಕೆಟ್ ಅನ್ನು ಒಡೆದು ಅದರಲ್ಲಿರುವ ತೊಗರಿಬೇಳೆಯ ಗುಣಮಟ್ಟವನ್ನು ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
ವಿಡಿಯೋದ ಜೊತೆಗೆ ಆ ವ್ಯಕ್ತಿ ಸರಕಾರ ಅನ್ನಭಾಗ್ಯದ ಹೆಸರಿನಲ್ಲಿ ಬಡ ಜನರನ್ನು ಯಾವ ರೀತಿಯಲ್ಲಿ ಮೋಸ ಮಾಡುತ್ತಿದೆ ಎನ್ನುವುದನ್ನೂ ವಿವರಿಸುತ್ತಾರೆ.
ವಿಡಿಯೋಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ.…
You must be logged in to post a comment Login