LATEST NEWS
ಖಾಸಗಿ ಬಸ್ ಪಲ್ಟಿ 35ಕ್ಕೂ ಅಧಿಕ ಮಂದಿಗೆ ಗಾಯ

ಖಾಸಗಿ ಬಸ್ ಪಲ್ಟಿ 35ಕ್ಕೂ ಅಧಿಕ ಮಂದಿಗೆ ಗಾಯ
ಮಂಗಳೂರು ಸೆಪ್ಟೆಂಬರ್ 11: ಖಾಸಗಿ ಬಸ್ ಪಲ್ಟಿಯಾಗಿ 35 ಕ್ಕೂ ಅಧಿಕ ಮಂದಿಗೆ ಗಾಯಗೊಂಡ ಘಟನೆ ಮಂಗಳೂರಿನ ಬೈಕಂಪಾಡಿಯಲ್ಲಿ ನಡೆದಿದೆ.
ಕಾಟಿಪಳ್ಳ – ಕೈಕಂಬ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಓವರ್ ಟೇಕ್ ಮಾಡೋ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಬೆಳಿಗ್ಗೆಯ ಸಮಯವಾದ್ದರಿಂದ ಬಸ್ ನಲ್ಲಿ ಶಾಲಾ ಕಾಲೇಜು ವಿಧ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿದ್ದರು. ಅದೃಷ್ಠವಶಾತ್ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಗಾಯಾಳುಗಳನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
