Connect with us

    LATEST NEWS

    7 ಮಂದಿ ದರೋಡೆಕೋರರ ಬಂಧನ : ಸಿಸಿಬಿ ಪೋಲಿಸರ ಕಾರ್ಯಾಚರಣೆ

     7 ಮಂದಿ ದರೋಡೆಕೋರರ ಬಂಧನ : ಸಿಸಿಬಿ ಪೋಲಿಸರ ಕಾರ್ಯಾಚರಣೆ

    ಮಂಗಳೂರು, ಅಕ್ಟೋಬರ್ 19 :ದರೋಡೆಗೆ ಯತ್ನಿಸುತಿದ್ದ ಏಳು ಜನರ ತಂಡವನ್ನು ಮಂಗಳೂರಿನ ಸಿಸಿಬಿ ಪೋಲಿಸರು ಬಂಧಿಸಿದ್ದಾರೆ. ಮಂಗಳೂರು ನಗರದ ಬಿಜೈ ಬಿಗ್ ಬಜಾರ್ ಎದುರು ದರೋಡೆಗೆ ಸ್ಕೆಚ್  ಹಾಕುತ್ತಿದ್ದ ಸಂದರ್ಭದಲ್ಲಿ  ಎಲ್ಲಾ ಏಳು ಮಂದಿ ಆರೋಪಿಗಳನ್ನು ಬಂಧಿಸಲು ಪೋಲಿಸರು  ಯಶಸ್ವಿ ಯಾಗಿದ್ದಾರೆ.

    ಬಂಧಿಸಿರುವ ಎಲ್ಲಾ ಆರೋಪಿಗಳು ಪ್ರಸ್ತುತ ಜೈಲ್ ನಲ್ಲಿ ವಿಚಾರಣಾ ಖೈದಿಯಾಗಿರುವ ಆಕಾಶಭವನ ಶರಣ್ ಎಂಬಾತನ ಸಹಚರರಾಗಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ. ಆರೋಪಿಗಳು ಕಾರಗೃಹದಲ್ಲಿರುವ ವಿಚಾರಣಾಧೀನ ಖೈದಿಆಕಾಶಭವನ ಶರಣ್ @ ರೋಹಿದಾಸ್ ಎಂಬಾತನ ಸೂಚನೆಯಂತೆ  ದರೋಡೆಗೆ ಸಂಚು ರೂಪಿಸಿರುವುದಾಗಿ ಪೋಲಿಸರು ತಿಳಿಸಿದ್ದಾರೆ. ಬಂಧಿತರನ್ನು ಆಕಾಶ ಭವನದ ಪ್ರೀತಂ ಪೂಜಾರಿ,ಕಾವೂರು ಕುಂಜತ್ ಬೈಲಿನ ವಿಶಾಲ್ ಕುಮಾರ್,ದೆರೆಬೈಲ್ ಬೋರುಗುಡ್ಡೆಯ ಗೌತಮ್ ದೇವಾಡಿಗ, ಮೂಡುಶೆಡ್ಡೆಯ ವಿನೋದ್ ರಾಜ್,ದಿವಾಕರ, ತೊಕ್ಕೊಟ್ಟು ಕೃಷ್ಣ ನಗರದ ಪ್ರವನ್, ಹಾಗೂ ಯೆಯ್ಯಾಡಿ ಗುಂಡಳಿಕೆಯ ಕಾರ್ತಿಕ್ ಎಂದು ಗುರುತ್ತಿಸಲಾಗಿದೆ.

    ಆರೋಪಿಗಳಿಂದ ಕೃತ್ಯಕ್ಕೆ ಬಳಸಲು ತಂದ ಮಾರಕಾ ಆಯುಧಗಳನ್ನು, 3 ದ್ವಿಚಕ್ರ ವಾಹನಗಳನ್ನು  ಹಾಗೂ 6 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.  ಆರೋಪಿಗಳ ಪೈಕಿ ಪ್ರೀತಂ ಎಂಬಾತನು ಈ ಹಿಂದೆ ಮಂಗಳೂರು ಪೂರ್ವ, ಬರ್ಕೆ, ಕಾವೂರುಪೊಲೀಸ್ ಠಾಣೆಗಳಲ್ಲಿ ದರೋಡೆಗೆ ಯತ್ನ,  ಹಫ್ತಾ ಹಣಕ್ಕೆ ಬೆದರಿಕೆಗೆ ಸಂಬಂಧಪಟ್ಟಂತೆ 3 ಪ್ರಕರಣಗಳು ದಾಖಲಾಗಿರುತ್ತದೆ.

    ವಿಶಾಲ್ ಕುಮಾರ್ ಎಂಬಾತನ ವಿರುದ್ಧ ಕಾವೂರು, ಬರ್ಕೆಪೊಲೀಸ್ ಠಾಣೆಗಳಲ್ಲಿ ಒಟ್ಟು 2 ಪ್ರಕರಣಗಳು ದಾಖಲಾಗಿರುತ್ತದೆ. ಆರೋಪಿಗಳನ್ನು ಹಾಗೂವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಉರ್ವಾ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply