Connect with us

    LATEST NEWS

    ಧಾರ್ಮಿಕ, ಸಾಮಾಜಿಕ ಧುರೀಣ ಕೆ.ಸೇಸಪ್ಪ ಕೋಟ್ಯಾನ್ ನಿಧನ

    ಮಂಗಳೂರು ಜನವರಿ 27: ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಕೊಡುಗೈ ದಾನಿ ಎಂದೇ ಹೆಸರು ಪಡೆದಿದ್ದ ಬಂಟ್ವಾಳ ತಾಲೂಕಿನ ಕೆ.ಸೇಸಪ್ಪ ಕೋಟ್ಯಾನ್(75)ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.


    ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ ವೇಳೆ ಇವರ ಆರೋಗ್ಯದಲ್ಲಿ ಏರುಪೇರಾಗಿದ್ದು ಅಲ್ಲಿಯೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಅವರು ಚಿಕಿತ್ಸೆ ಗೆ ಸ್ಪಂದಿಸಿದೆ ಸಂಜೆ ವೇಳೆ ಮೃತಪಟ್ಟ ಬಗ್ಗೆ ಮನೆಯವರು ತಿಳಿಸಿದ್ದಾರೆ.

    ಮೃತದೇಹವನ್ನು ಇಂದು ಬೆಳಗ್ಗೆ 9ರಿಂದ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಮೃತರ ಸ್ವಗೃಹ ಪಚ್ಚಿನಡ್ಕದ ಶುಭ ನಿಲಯದಲ್ಲಿ ಇಡಲಾಗುತ್ತಿದ್ದು, ಮಧ್ಯಾಹ್ನ 12.30ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೃತರ ಕುಟುಂಬಸ್ಥರು ತಿಳಿಸಿದ್ದಾರೆ.
    ಬಂಟ್ವಾಳದಲ್ಲಿ ಯಶಸ್ವಿ ಉದ್ಯಮಿ ಎಂಬ ಹೆಗ್ಗಳಿಕೆ ಗೆ ಪಾತ್ರವಾಗಿದ್ದ ಇವರು ಶುಭ ಬೀಡಿ, ಶುಭ ಟ್ರಾವೆಲ್ಸ್ , ಶುಭಲಕ್ಮೀ ಮದುವೆ ಹಾಲ್, ಸಹಿತ ಅನೇಕ ಉದ್ಯಮ ನಡೆಸುತ್ತಿದ್ದು, ಅನೇಕ ಕುಟುಂಬಗಳಿಗೆ ಉದ್ಯೋಗ ನೀಡಿದ ಅನ್ನದಾತರಾಗಿದ್ದರು.
    ಇವರ ಮದುವೆಯಾಗಿ ಐವತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇತ್ತೀಚಿಗೆ ಮನೆಯಲ್ಲಿ ಶುಭಯಾನ ಎಂಬ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಯನ್ನು ಈ ಬಾರಿ ಪಡೆದಿದ್ದರು.

     

    Share Information
    Advertisement
    Click to comment

    You must be logged in to post a comment Login

    Leave a Reply