LATEST NEWS
ಸರಣಿ ಕಳ್ಳತನದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ದಕ್ಷಿಣಕನ್ನಡ ಜಿಲ್ಲಾ ಪೊಲೀಸರು
ಪುತ್ತೂರು ಫೆಬ್ರವರಿ 05: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸರಣಿ ಕಳ್ಳತನ ನಡೆಸಿದ ನಟೋರಿಯಸ್ ಗ್ಯಾಂಗ್ ವೊಂದನ್ನು ಪತ್ತೆ ಹಚ್ಚುವಲ್ಲಿ ಬಂಟ್ವಾಳ ಹಾಗೂ ವಿಟ್ಲ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಮಂಗಳೂರು ವಲಚ್ಚಿಳ್ ಪದವು ನಿವಾಸಿ ಅಮ್ಮೀ ಯಾನೆ ಅಮರುದ್ದಿನ್, ಕುಳ್ನಾಡ್ ನಿವಾಸಿ ಮಹಮ್ಮದ್ ಯೂನಸ್, ಮಂಗಳೂರು ಕಣ್ಣೂರು ನಿವಾಸಿ ಹಫೀಸ್ ಯಾನೆ ಅಪ್ಪಿ, ಸಜಿಪಮೂಡ ಪೆರ್ವಾದ ಫಾರೂಕ್ ಯಾನೆ ಉಮ್ಮರ್ ಫಾರೂಕ್ ಯಾನೆ ಕಳ್ಳ ಫಾರೂಕ್(27), ಮಂಗಳೂರು ಬೆಂಗ್ರೇ ನಿವಾಸಿ ಮಹಮ್ಮದ್ ಸಫ್ವಾನ್ ಯಾನೆ ಸಫ್ವಾನ್(19) ಎಂದು ಗುರುತಿಸಲಾಗಿದೆ.
ಬಂಟ್ವಾಳ ಸುರಭಿ ಬಾರ್ ಕಳ್ಳತನ, ವಿಟ್ಲದ ಮಾಣಿಯಲ್ಲಿ ಜ.25ರಂದು ನಡೆದ ಬಾರ್ ಕಳ್ಳತನ, ನೇರಳಕಟ್ಟೆಯ ಸಣ್ಣ ಜ್ಯುವೆಲ್ಲರಿಯಲ್ಲಿ ಕಳ್ಳತನ ಯತ್ನ, ಉರಿಮಜಲು ಲಕ್ಷ್ಮೀ ಪ್ಯುಯಲ್ ಪೆಟ್ರೋಲ್ ಬಂಕ್ ಶಟರ್ ಮುರಿದು ಇಲೆಕ್ಟ್ರಾನಿಕ್ ಸಾಮಾಗ್ರಿ ಕಳವು ಹಾಗೂ ಸಜೀವ ಗುಂಡು ಕಳವುಗೈದ ಪ್ರಕರಣ ಸೇರಿದಂತೆ ಒಟ್ಟು 13 ಪ್ರಕರಣಗಳು ಇವರ ಮೇಲೆ ಇದೆ.
ಆರೋಪಿಗಳು ಮುಡಿಪು ಕಡೆಯಿಂದ ಬೈಕ್ ನಲ್ಲಿ ಬರುತ್ತಿದ್ದವರನ್ನು ತಪಾಸಣೆಗೊಳಪಡಿಸಿದ ಸಂದರ್ಭ ಸಫ್ವಾನ್ ಪ್ಯಾಂಟ್ ಕಿಸೆಯಲ್ಲಿ ಜೀವಂತ ಬುಲೆಟ್ ತುಂಬಿದ ಬಾಕ್ಸ್ ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಬೈಕ್ ಸವಾರರನ್ನು ವಿಚಾರಣೆಗೊಳಪಡಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಸದರಿ ಆರೋಪಿಗಳಿಂದ 3 ಬೈಕ್ ,ಒಂದು ಮೊಬೈಲ್, 6 DVR set box , 14 ಜೀವಂತ ಗುಂಡು, 2 ಮಾನಿಟರ್, ಬ್ರಾಡ್ ಬ್ಯಾಂಡ್ ಒ ಎಲ್ ಟಿ ಬಾಕ್ಸ್ ಪತ್ತೆ ಹಚ್ಚುವ ಮತ್ತು ರೂ 40,000 ಸಾವಿರ ಹಣ ಸೇರಿದಂತೆ ಒಟ್ಟು ಅಂದಾಜು ರೂ 4,80,000 ಮೌಲ್ಯದ ಸೊತ್ತುಗಳನ್ನು ವಶಪಡಿಸಿರುತ್ತಾರೆ.