DAKSHINA KANNADA
ಅರಂತೋಡಿನಲ್ಲಿ ಶಿಕಾರಿಗೆ ಹೋದ ಯುವಕನಿಗೆ ಗುಂಡೇಟು, ಆಸ್ಪತ್ರೆಗೆ ದಾಖಲು!
ಸುಳ್ಯ, ಫೆಬ್ರವರಿ 05 : ಸುಳ್ಯದ ಅರಂತೋಡಿನಲ್ಲಿ ಶಿಕಾರಿಗೆಂದು ಹೋದ ನಾಲ್ವರಲ್ಲಿ ಓರ್ವನಿಗೆ ಗುಂಡು ತಗುಲಿ ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾದ ಘಟನೆ ನಡೆದಿದೆ.
ಅರಂತೋಡಿನ ನಾಲ್ವರು ಯುವಕರು ನಿನ್ನೆ ರಾತ್ರಿ ಶಿಕಾರಿಗೆ ಪೂಮಲೆ ಕಾಡಿಗೆ ಹೋಗಿದ್ದರು. ಬೇರೆ ಬೇರೆ ಕಡೆ ಕುಳಿತು ಕಾಡುಪ್ರಾಣಿಗಳ ನಿರೀಕ್ಷೆಯಲ್ಲಿದ್ದಾಗ ಶಬ್ದ ಬಂದತ್ತ ಒಬ್ಬ ಗುಂಡು ಹಾರಿಸಿದ. ಅದು ಆ ಕಡೆ ಕುಳಿತಿದ್ದ ಸತ್ಯಮೂರ್ತಿ ಎಂಬ ಯುವಕನಿಗೆ ತಾಗಿತೆಂದು ತಿಳಿದುಬಂದಿದೆ.
ಗುಂಡೇಟಿಗೆ ಒಳಗಾದ ಸತ್ಯಮೂರ್ತಿಯನ್ನು ರಾತ್ರಿ 2 ಗಂಟೆಯ ವೇಳೆಗೆ ಸುಳ್ಯ ಕೆವಿಜಿ ಆಸ್ಪತ್ರೆಗೆ ತಂದು ದಾಖಲಿಸಲಾಗಿದೆ. ಸುಳ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.