DAKSHINA KANNADA
ಬೈಕ್-ರಿಕ್ಷಾ ನಡುವೆ ಭೀಕರ ಅಪಘಾತ, ಸುಳ್ಯ ಕಾಲೇಜ್ ವಿದ್ಯಾರ್ಥಿ ದಾರುಣ ಸಾವು!
ಪುತ್ತೂರು, ಫೆಬ್ರವರಿ 05: ಬೈಕ್ ಮತ್ತು ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಮುರ ಎಂಬಲ್ಲಿ ಇಂದು ರಾತ್ರಿ ನಡೆದಿದೆ.
ಮೃತಪಟ್ಟ ಯುವಕನನ್ನು ಪುತ್ತೂರು ತಾಲೂಕಿನ ಬನ್ನೂರು ನಿವಾಸಿ ಅಭಿನವ್(23) ಎಂದು ಗುರುತಿಸಲಾಗಿದೆ. ಅಭಿನವ್ ಅವರು ಸುಳ್ಯ ಕೆ.ವಿ.ಜಿ ಕಾಲೇಜ್ ನಲ್ಲಿ ವಿದ್ಯಾರ್ಥಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಪುತ್ತೂರಿನಿಂದ ಕೆದಿಲಕ್ಕೆ ತಿರುಗುವ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದ್ದು.
ಕಬಕ ಕಡೆಯಿಂದ ಪುತ್ತೂರಿಗೆ ಆಗಮಿಸುತ್ತಿದ್ದ ಅಭಿನವ್, ಕೆದಿಲ ಕಡೆಗೆ ಹೋಗುತ್ತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಅಭಿನವ್ ರಸ್ತೆಗೆ ಎಸೆಯಲ್ಪಟ್ಟಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.