Connect with us

    LATEST NEWS

    ಮಹಡಿಯಿಂದ ಬಿದ್ದು ಹಿರಿಯ ಪತ್ರಕರ್ತ ಉಮೇಶ್ ಉಪಾಧ್ಯಾಯ ಮೃತ್ಯು..!

    ಹೊಸದಿಲ್ಲಿ:  ಹಿರಿಯ ಪತ್ರಕರ್ತ ಉಮೇಶ್ ಉಪಾಧ್ಯಾಯ (66)  ಹೊಸದಿಲ್ಲಿಯ ವಸಂತ್ ಕುಂಜ್ ನಲ್ಲಿ ಭಾನುವಾರ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ದಾರುಣ ಅಂತ್ಯ ಕಂಡಿದ್ದಾರೆ.

    ವಸಂತ್ ಕುಂಜ್ ಸಿ-8 ಬ್ಲಾಕ್ ನಲ್ಲಿದ್ದ ತಮ್ಮ ಮನೆಯ ನವೀಕರಣ ಕಾರ್ಯವನ್ನು ವೀಕ್ಷಿಸಲು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬೆಳಿಗ್ಗೆ 10.30ರ ಸುಮಾರಿಗೆ ಆಕಸ್ಮಿಕವಾಗಿ ನಾಲ್ಕನೇ ಮಹಡಿಯಿಂದ ಎರಡನೇ ಮಹಡಿಗೆ ಬಿದ್ದರು.  ತಲೆಗೆ ಗಂಭೀರ ಗಾಯಗಳಾಗಿದ್ದ ಅವರಿಗೆ ದೇಹದ ಇತರ ಭಾಗಗಳಿಗೂ ಗಾಯಗಳಾಗಿದ್ದವು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಭಾನುವಾರ ತಡ ರಾತ್ರಿ ಮೃತಪಟ್ಟರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಪತ್ರಿಕೋದ್ಯಮದಲ್ಲಿ ನಾಲ್ಕು ದಶಕಗಳ ಸುಧೀರ್ಘ ಸೇವೆ ಸಲ್ಲಿಸಿದ್ದ ಉಮೇಶ್ ಅವರು, ನೆಟ್ ವರ್ಕ್ 18 ವಾಹಿನಿಯ ಅಧ್ಯಕ್ಷರಾಗಿದ್ದರು. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಝೀ ನ್ಯೂಸ್, ಸಾಬ್ ಟಿವಿ, ಜನ್ಮತ್ ಟಿವಿ, ದೂರದರ್ಶನ ಮತ್ತು ಪಿಟಿಐ ಸೇರಿದಂತೆ ಹಲವು ಸುದ್ದಿಸಂಸ್ಥೆಗಳಲ್ಲಿ ಅವರು ಸೇವೆ ಸಲ್ಲಿಸಿದ್ದರು. ಸತೀಶ್ ಅಕಾಲಿಕ ನಿಧನಕ್ಕೆ ಎಕ್ಸ್ ಪೋಸ್ಟ್ ನಲ್ಲಿ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, “ಹಿರಿಯ ಪತ್ರಕರ್ತ ಮತ್ತು ಲೇಖಕ ಉಮೇಶ್ ಉಪಾಧ್ಯಾಯ ನಿಧನದಿಂದ ತೀವ್ರ ಆಘಾತವಾಗಿದೆ. ಡಿಜಿಟಲ್ ಮಾಧ್ಯಮ ಮತ್ತು ಟಿವಿ ಕ್ಷೇತ್ರದಲ್ಲಿ ಅವರು ಅಮೋಘ ಸೇವೆ ಸಲ್ಲಿಸಿದ್ದರು. ಅವರ ನಿಧನ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ ಈ ದುಃಖದ ಸಂದರ್ಭದಲ್ಲಿ ಸಾಂತ್ವನ ಹೇಳುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply