Connect with us

    FILM

    ರಾಧಿಕಾ ನಾರಾಯಣ್‌ ಫೋಟೋಶೂಟ್ ನೋಡಿ ಸ್ಪೈಸಿ ಅಂತವ್ರೆ ಫ್ಯಾನ್ಸ್!

    ಬೆಂಗಳೂರು, ಜೂನ್ 03: ರಾಧಿಕಾ ನಾರಾಯಣ್ ಹೊಸ ಫೋಟೊ ಶೂಟ್ ಮಾಡಿದ್ದಾರೆ. ಈ ಫೋಟೊಗಳಲ್ಲಿ ರಾಧಿಕಾ ಬೇರೆ ರೀತಿ ಕಾಣ್ತಿದ್ದಾರೆ. ಇದನ್ನ ಕಂಡ ಫ್ಯಾನ್ಸ್ ಸ್ಪೈಸಿ ಸ್ಪೈಸಿ ಅಂತ ಬಣ್ಣಿಸುತ್ತಿದ್ದಾರೆ.

    ಶಿವರಾಜಿ ಸುರತ್ಕಲ್ -2 ನಾಯಕಿ ರಾಧಿಕಾ ನಾರಾಯಣ್ ಸ್ಪೈಸಿ ಫೋಟೋ ಶೂಟ್ ಮಾಡಿಸ್ತಿದ್ದಾರೆ. ಹಾಗಂತ ಈ ಫೋಟೋಗಳನ್ನ ನಾವು ಸ್ಪೈಸಿ ಅಂತ ಹೇಳ್ತಿಲ್ಲ. ಸ್ವತಃ ರಾಧಿಕಾ ಈ ಪದ ಬಳಕೆ ಮಾಡಿದ್ದಾರೆ. ಇದನ್ನ ಅಭಿಮಾನಿಗಳು ತುಂಬಾ ಮೆಚ್ಚಿಕೊಂಡಿದ್ದಾರೆ.

    ರಾಧಿಕಾ ನಾರಾಯಣ್ ಸಾಮಾನ್ಯವಾಗಿ ಸರಳ, ಸುಂದರ ಚಿತ್ರಗಳಿಗೆ ಹೆಚ್ಚು ಒತ್ತು ಕೊಡ್ತಿದ್ದಾರೆ. ಆದರೆ ಇದೀಗ ರಾಧಿಕಾ ಕೂಡ ಟ್ರೆಂಡಿಯಾಗಿ ಬದಲಾಗುತ್ತಿದ್ದಾರೆ. ಮಾದಹಕ, ಮೋಹಕ ಅನ್ನೋ ಹಾಗೆ ಹೊಸ ರೀತಿಯ ಲುಕ್ ಆ್ಯಂಡ್ ಫೀಲ್‌ ಅಲ್ಲೂ ರಾಧಿಕಾ ಹೊಳೆಯುತ್ತಿದ್ದಾರೆ.

    ರಾಧಿಕಾ ನಾರಾಯಣ್ ಸದ್ಯ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೇಜ್‌ ಅಲ್ಲಿ ಒಂದಷ್ಟು ಫೋಟೋ ಹಂಚಿಕೊಂಡಿದ್ದಾರೆ. ಇವುಗಳನ್ನ ನೋಡಿದ ಅಭಿಮಾನಿಗಳು ಸ್ಪೈಸಿ ಫೋಟೋ ಶೂಟ್, ಸ್ಪೈಸಿ ಆಗಿಯೇ ಇದೆ ಅಂತಲೇ ಹೊಗಳಿದ್ದಾರೆ. ರಾಧಿಕಾ ನಾರಾಯಣ್ ಹೊಸ ಫೋಟೋ ಶೂಟ್‌ನಲ್ಲಿ ರಾಧಿಕಾ ಲುಕ್ ಬದಲಾಗಿದೆ. ಕ್ಯಾಮೆರಾ ಮುಂದೆ ಕೊಟ್ಟ ಪೋಸ್‌ಗಳು ವಿಭಿನ್ನವಾಗಿಯೆ ಇವೆ. ಇವುಗಳನ್ನ ನೋಡಿದ್ರೆ ಮಾದಕತೆ ಸೂಸುತ್ತಿದೆ ಅನ್ನೋ ಭಾವನೆ ಕಂಡಿತಾ ಮೂಡುತ್ತದೆ.

    ರಾಧಿಕಾ ನಾರಾಯಣ್ ಸಿನಿಮಾಗಳ ಮಧ್ಯ ಆಗೊಮ್ಮೆ ಈಗೊಮ್ಮೆ ಫೋಟೋ ಶೂಟ್‌ಗಳಲ್ಲೂ ಕಾಣೋದಿದೆ. ಆ ಲೆಕ್ಕದಲ್ಲಿ ಈಗೀನ ಫೋಟೋ ಕೊಂಚ ಜಾಸ್ತಿನೆ ಡಿಫರಂಟ್ ಆಗಿದೆ ಅನಿಸುತ್ತಿದೆ ನೋಡಿ.

    Share Information
    Advertisement
    Click to comment

    You must be logged in to post a comment Login

    Leave a Reply