Connect with us

KARNATAKA

ಪತ್ನಿಯನ್ನು ಕೊಂದು ಗೋಳಾಡುತ್ತಾ ಆಸ್ಪತ್ರೆಗೆ ಹೊತ್ತು ತಂದ ಗಂಡ!

Share Information

ಬೆಂಗಳೂರು, ಜೂನ್ 03: ಪತ್ನಿಯನ್ನು ಕೊಲೆ ಮಾಡಿ ಮಾತಾಡುತ್ತಿಲ್ಲ ಎಂದು ಶವವನ್ನು ಆಸ್ಪತ್ರೆಗೆ ತಂದ ಘಟನೆ ಸಿಲಿಕಾನ್ ಸಿಟಿಯ ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಈ ಬಗ್ಗೆ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಗಂಡನ ಅಸಲಿ ಬಣ್ಣ ಬೆಳಕಿಗೆ ಬಂದಿದೆ. ಶರತ್ ಕೊಲೆಗೈದ ಪತಿರಾಯ. ಪ್ರಿಯಾ ಕೊಲೆಯಾದ ಮಹಿಳೆ. ಆರೋಪಿ ಶರತ್​ಗೆ ಇಬ್ಬರು ಪತ್ನಿಯರು. ಶರತ್ ಎರಡನೇ ಪತ್ನಿ ಪ್ರಿಯಾ ಜೊತೆ ಯಶವಂತಪುರದಲ್ಲಿ ವಾಸವಾಗಿದ್ದನು. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತನಿಖೆಯಲ್ಲಿ ಶರತ್​ ಕಳ್ಳಾಟ ಬಯಲಾಗಿದೆ.

ನಡೆದಿದ್ದು ಏನು? : ಎರಡು ದಿನದ ಹಿಂದೆ ಆಸ್ಪತ್ರೆಗೆ ಪತ್ನಿಯನ್ನು ಆಸ್ಪತ್ರೆಗೆ ಹೊತ್ತು ತಂದ ಶರತ್, ನನ್ನ ಮಡದಿ ಮಾತನಾಡುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾನೆ. ವೈದ್ಯರು ಪರೀಕ್ಷೆ ನಡೆಸಿ ಸಾವನ್ನಪ್ಪಿರೋದಾಗಿ ಹೇಳಿದ ಕೂಡಲೇ ಆಸ್ಪತ್ರೆಯಲ್ಲಿಯೇ ಶರತ್ ಗೋಳಾಡಿದ್ದಾನೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರಿಗೆ ಆರಂಭದಲ್ಲಿಯೇ ಶರತ್ ಮೇಲೆ ಅನುಮಾನ ಮೂಡಿತ್ತು. ವೈದ್ಯರು ಸಹ ಮಹಿಳೆ ಮೇಲೆ ಹಲ್ಲೆ ನಡೆದಿದೆ ಹಾಗೂ ಕುತ್ತಿಗೆಯ ಭಾಗದಲ್ಲಿ ಮೂಳೆ ಮುರಿತ ಆಗಿರೋದನ್ನು ವೈದ್ಯರು ಖಚಿತಪಡಿಸಿದ್ದರು.

ವೈದ್ಯರು ನೀಡಿದ ಮಾಹಿತಿ ಆಧಾರದ ಮೇಲೆ ಶರತ್​ನನ್ನು ತೀವ್ರ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಕೊಲೆ ವಿಷಯವನ್ನು ಬಚ್ಚಿಡುವ ಉದ್ದೇಶದಿಂದ ನಾಟಕ ಮಾಡಿರೋದಾಗಿ ಶರತ್ ಹೇಳಿಕೊಂಡಿದ್ದಾನೆ.

ಕೊಲೆಗೂ ಮುನ್ನ ಶರತ್ ಹಾಗೂ ಪ್ರಿಯಾ ನಡುವೆ ಜಗಳ ನಡೆದಿತ್ತು. ಮೊದಲ ಪತ್ನಿ ಬಳಿ ಹೋಗ್ತಿಯಾ ಎಂದು ಪ್ರಿಯಾ ಗಲಾಟೆ ಮಾಡಿದ್ದಳು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಮತ್ತೆ ಜಗಳ ನಡೆದಿದೆ. ಈ ವೇಳೆ ಶರತ್ ಹಲ್ಲೆ ನಡೆಸಿದ್ದರಿಂದ ಮನೆಯಲ್ಲಿಯೇ ಪ್ರಿಯಾ ಸಾವನ್ನಪ್ಪಿದ್ದಾರೆ.


Share Information
Advertisement
Click to comment

You must be logged in to post a comment Login

Leave a Reply