Connect with us

    LATEST NEWS

    ಶವದಿಂದ ವಜ್ರದ ಇಯರ್ ರಿಂಗ್ ಕದ್ದ ಸೆಕ್ಯುರಿಟಿ ಗಾರ್ಡ್

    ಮಂಗಳೂರು ಅಗಸ್ಟ್ 23: ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಶವಾಗಾರದಲ್ಲಿ ಮೃತದೇಹದ ಕಿವಿಯಿಂದ ನಾಪತ್ತೆಯಾಗಿದ್ದ ವಜ್ರ ಓಲೆಯನ್ನು ಕದ್ರಿ ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಶವಗಾರದ ಸೆಕ್ಯುರಿಟಿ ಗಾರ್ಡ್ ಕಳ್ಳತನದ ಆರೋಪಿಯಾಗಿದ್ದಾನೆ.


    ಪಡೀಲ್ ನಿವಾಸಿ ಪ್ರಸ್ತುತ ಬಳ್ಳಾಲ್ ಬಾಗ್ ನಲ್ಲಿ ವಾಸವಿದ್ದ ಹರೀಶ್ ಶೆಟ್ಟಿ(45) ಗುರುವಾರ ಹೃದಯಾಘಾ ತದಿಂದ ನಿಧನರಾಗಿದ್ದು, ಮೃತದೇಹವನ್ನು ಖಾಸಗಿ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿತ್ತು. ಮೃತರ ದೇಹದ ಮೇಲಿದ್ದ ಚಿನ್ನದ ಸರವನ್ನು ತಗೆಯಲಾಗಿತ್ತು, ಆದರೆ ಕಿವಿಯಲ್ಲಿನ ವಜ್ರದ ಓಲೆ ಹಾಗೆಯೇ ಬಿಡಲಾಗಿದ್ದು, ಅಂತ್ಯಕ್ರಿಯೆ ಸಂದರ್ಭ ತೆಗೆಯಲು ಯೋಜಿಸಿದ್ದರು, ಆದರೆ ಅಂತ್ಯ ಕ್ರಿಯೆ ಸಂದರ್ಭ ಕಿವಿಯಲ್ಲಿದ್ದ ರಿಂಗ್ ಕಾಣೆಯಾಗಿತ್ತು.

    ಮೃತ ವ್ಯಕ್ತಿ ಹರೀಶ್ ಶೆಟ್ಟಿ

    ಈ ಬಗ್ಗೆ ಸೆಕ್ಯುರಿಟಿ ಗಾರ್ಡ್ ಬಳಿ, ಕಾಣೆಯಾದ ಇಯರ್ ರಿಂಗ್‌ಗಳ ಬಗ್ಗೆ ಕೇಳಿದಾಗ, ತನಗೇನೂ ತಿಳಿದಿಲ್ಲ ಎಂದು ಉತ್ತರಿಸಿದ್ದ. ನಂತರ ಕದ್ರಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಸೆಕ್ಯುರಿಟಿ ಗಾರ್ಡ್ ವಿಚಾರಿಸಿದಾಗ ಆತನೇ ಕದ್ದಿರುವುದು ಗೊತ್ತಾಗಿದ್ದು, ಅದರ ನಂತರ ಅವರು ಹರೀಶ್ ಶೆಟ್ಟಿಯ ಕುಟುಂಬ ಸದಸ್ಯರಿಗೆ ಇಯರ್ ರಿಂಗ್‌ಗಳನ್ನು ಹಿಂದಿರುಗಿಸಿದ್ದಾರೆ ಎಂದು ತಿಳಿದುಬಂದಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *