LATEST NEWS
ನವೆಂಬರ್ 5 ರಂದು ಒಂದು ದಿನದ ಪೂಜೆಗೆ ಶಬರಿಮಲೆ ಓಪನ್ ಇಂದಿನಿಂದ ಸೆಕ್ಷನ್ 144 ಜಾರಿ
ನವೆಂಬರ್ 5 ರಂದು ಒಂದು ದಿನದ ಪೂಜೆಗೆ ಶಬರಿಮಲೆ ಓಪನ್ ಇಂದಿನಿಂದ ಸೆಕ್ಷನ್ 144 ಜಾರಿ
ಮಂಗಳೂರು ನವೆಂಬರ್ 3: ಸುಪ್ರೀಂಕೋರ್ಟ್ ಶಬರಿಮಲೆಗೆ ಮಹಿಳೆಯರ ಪ್ರವೇಶದ ಆದೇಶದ ನಂತರದ ವಿವಾದ ಇನ್ನೂ ಮುಂದುವರಿದಿರುವ ಹಿನ್ನಲೆಯಲ್ಲಿ ಈಗ ಮತ್ತೆ ನವೆಂಬರ್ 5ರಂದು ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಲಿರುವ ಹಿನ್ನಲೆಯಲ್ಲಿ ಒಂದು ದಿನಕ್ಕಾಗಿ ಶಬರಿಮೆಲೆ ಓಪನ್ ಆಗಲಿದೆ.
ಒಂದು ದಿನದ ಪೂಜೆಗಾಗಿ ನವೆಂಬರ್ 5 ಸೋಮವಾರ ಶಬರಿಮಲೆ ದೇಗುಲದ ಬಾಗಿಲು ತೆರೆಯಲಿರುವ ಹಿನ್ನಲೆಯಲ್ಲಿ ಶಬರಿಮಲೆ ದೇವಸ್ಥಾನದ ಸಮೀಪ ಪಂಪಾ ಮತ್ತು ಇತರ ಪ್ರದೇಶಗಳಲ್ಲಿ ಶನಿವಾರ ರಾತ್ರಿಯಿಂದ ಮಂಗಳವಾರದವರೆಗೆ ನಿಷೇಧಾಜ್ಞೆ ಹೇರಲಾಗಿದೆ.
ಎಲ್ಲ ವಯಸ್ಸಿನ ಮಹಿಳೆಯರೂ ಶಬರಿಮಲೆ ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರ ಕೇರಳದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೂ ಕೇರಳ ಸರಕಾರ ಅಕ್ಟೋಬರ್ ನಲ್ಲಿ 5 ದಿನ ದೇಗುಲದ ಬಾಗಿಲು ತೆರೆದ ಸಂದರ್ಭದಲ್ಲಿ ಅಯ್ಯಪ್ಪ ಭಕ್ತರ ಮೇಲೆ ದೌರ್ಜನ್ಯವೆಸಗಿತ್ತು ಎಂದು ಆರೋಸಲಾಗಿತ್ತು. ಅಲ್ಲದೆ ಅಯ್ಯಪ್ಪ ಭಕ್ತರನ್ನು ಬಿಟ್ಟು ಸಾಮಾಜಿಕ ಕಾರ್ಯಕರ್ತೆಯರನ್ನು ಪೊಲೀಸ್ ಸರ್ಪಗಾವಲಿನಲ್ಲಿ ದೇವಸ್ಥಾನ ಸಮೀಪದವರೆಗೂ ಕರೆದುಕೊಂಡು ಹೋಗಿದ್ದರು.
ಕಳೆದ ತಿಂಗಳು ಬಾಗಿಲು ತೆಗೆದು ಸಂದರ್ಭದಲ್ಲಿ ನಡೆದ ಹಿಂಸಾಚಾರದಿಂದ ಎಚ್ಚೆತ್ತ ಕೇರಳ ಸರಕಾರ ಈ ಬಾರಿ ಈಗಾಗಲೇ ಸೆಕ್ಷನ್ 144 ಅನ್ನು ಜಾರಿಗೊಳಿಸಿದೆ. ಕೇವಲ 1 ದಿನ ಶಬರಿಮಲೆ ದೇವಸ್ಥಾನದ ಬಾಗಿಲು ವಿಶೇಷ ಪೂಜೆಗಾಗಿ ತೆರೆಯುವ ಹಿನ್ನಲೆಯಲ್ಲಿ ಶನಿವಾರದಿಂದಲೇ ಸೆಕ್ಷನ್ 144 ಅನ್ನು ಜಾರಿಗೊಳಿಸಿದೆ.