LATEST NEWS
ನವಮಂಗಳೂರು ಬಂದರಿನಲ್ಲಿ ಹಡಗಿನ ಟ್ಯಾಂಕರ್ ಒಡೆದು ತೈಲ ಸೋರಿಕೆ
ನವಮಂಗಳೂರು ಬಂದರಿನಲ್ಲಿ ಹಡಗಿನ ಟ್ಯಾಂಕರ್ ಒಡೆದು ತೈಲ ಸೋರಿಕೆ
ಮಂಗಳೂರು ನವೆಂಬರ್ 3: ಮಂಗಳೂರು ಬಂದರಿನ ಹಡಗಿನ ಟ್ಯಾಂಕರ್ ಒಂದು ಒಡೆದ ಪರಿಣಾಮ ಸುಮಾರು 150 ಲೀಟರ್ ಅಧಿಕ ಪ್ರಮಾಣದ ತೈಲ ಸಮುದ್ರಕ್ಕೆ ಸೇರಿದೆ.
ಶ್ರೀಲಂಕಾದ ಕೊಲಂಬೋದಿಂದ ಬಂದಿದ್ದ ಎಂ.ವಿ. ಎಕ್ಸ್‌ಪ್ರೆಸ್ ಬ್ರಹ್ಮಪುತ್ರ ಹಡಗಿನ ಟ್ಯಾಂಕರ್ ಒಡೆದ ಪರಿಣಾಮ ಈ ಘಟನೆ ನಡೆದಿದೆ. ಹಡಗನ್ನು ಟಗ್‍ನಲ್ಲಿ ಬಂದರಿನ ಜೆಟ್ಟಿಯಿಂದ ಹೊರಕ್ಕೆ ಒಯ್ಯಲಾಗುತ್ತಿತ್ತು. ಈ ವೇಳೆ ಜೆಟ್ಟಿಯ ಗೋಡೆ ಹಡಗಿನಲ್ಲಿದ್ದ ಟ್ಯಾಂಕರ್ ಗೆ ಬಡಿದ ಪರಿಣಾಮ, ಟ್ಯಾಂಕರ್ ನಿಂದ ತೈಲ ಸೋರಿಕೆಯಾಗಿದೆ.
ಸುಮಾರು 150 ಲೀಟರಿಗೂ ಅಧಿಕ ಪ್ರಮಾಣದ ತೈಲ ಸಮುದ್ರ ಸೇರಿದೆ. ನಗರದ ಎನ್‍ಎಂಪಿಟಿ ಬಂದರಿನಿಂದ ಕಂಟೈನರ್ ಲೋಡ್ ಮಾಡಿ ಹಿಂದಿರುಗುವ ವೇಳೆ ಈ ಅವಘಡ ನಡೆದಿದೆ. ಕೂಡಲೇ ಎಚ್ಚೆತ್ತ ಹಡಗಿನ ಸಿಬ್ಬಂದಿ ಹಾಗೂ ಸ್ಥಳೀಯರು ಸೋರಿಕೆಯನ್ನು ತಡೆದು, ಸಮುದ್ರದಲ್ಲಿ ತೈಲ ಹರಡದಂತೆ ಕ್ರಮ ವಹಿಸಿದ್ದಾರೆ.