DAKSHINA KANNADA
ಪುತ್ತೂರು – ನೀಟ್ (NEET ) ಪರೀಕ್ಷೆಯಲ್ಲಿ ಪುತ್ತೂರಿನ ವಿದ್ಯಾರ್ಥಿನಿಗೆ ದ್ವಿತೀಯ ರಾಂಕ್
ಪುತ್ತೂರು ನವೆಂಬರ್ 02:ದೈಹಿಕ ಸಮಸ್ಯೆಯನ್ನು ಮೆಟ್ಟಿನಿಂತು ನೀಟ್ ಪರೀಕ್ಷೆಯ ವಿಶೇಷ ಚೇತನರ ವಿಭಾಗದಲ್ಲಿ ಪುತ್ತೂರಿನ ವಿಧ್ಯಾರ್ಥಿನಿ ದೇಶಕ್ಕೆ ಎರಡನೇ ರಾಂಕ್ ಪಡೆದಿದ್ದಾಳೆ. ವಿವೇಕಾನಂದ ಕಾಲೇಜಿನ ಪಿಯು ವಿದ್ಯಾರ್ಥಿನಿ ಸಿಂಚನಾ ಲಕ್ಷ್ಮಿ ದ್ವಿತೀಯ ರಾಂಕ್ ಪಡೆದ ವಿದ್ಯಾರ್ಥಿನಿ. ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಕೊಡೆಂಕಿರಿ ನಿವಾಸಿ ಮುರಳೀಧರ ಭಟ್ ಮತ್ತು ಶೋಭಾ ಭಟ್ ದಂಪತಿಯ ಪುತ್ರಿ ಸಿಂಚನ ಲಕ್ಷ್ಮೀ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಸಿಂಚನ ಲಕ್ಷ್ಮೀ ಅವರಿಗೆ ಚಿಕ್ಕಂದಿನಿಂದಲೇ ಬೆನ್ನುಹುರಿ ಬೆಳವಣಿಗೆಯ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಸಮಸ್ಯೆಗೆ ಅವರು ಹಲವಾರು ಭಾರಿ ಸರ್ಜರಿ ಕೂಡ ಮಾಡಲಾಗಿದೆ. ಆದರೆ ದೇಹದ ಈ ಸಮಸ್ಯೆಯ ನಡುವೆ ಅವರು ಓದಿನಲ್ಲಿ ಸದಾ ಮುಂದೆ ಇರುತ್ತಿದ್ದ ಅವರು ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದರು. ಇದೀಗ ಕಬ್ಬಿಣದ ಕಡಲೆಯಾಗಿರುವ ನೀಟ್ ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕ್ ಗಳಿಸುವುದರ ಮೂಲಕ ರಾಜ್ಯಕ್ಕೆ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ. ನೀಟ್ ಪರೀಕ್ಷೆಯಲ್ಲಿ 720 ಅಂಕಗಳಲ್ಲಿ 658 ಅಂಕವನ್ನು ಸಿಂಚನಾ ಪಡೆದಿದ್ದಾರೆ.