Connect with us

LATEST NEWS

ಕೇರಳ – ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶವ ಬಾವಿಯಲ್ಲಿ ಪತ್ತೆ

ತಿರುವನಂತಪುರಂ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳ ಶವ ಬಾವಿಯಲ್ಲಿ ಪತ್ತೆಯಾಗಿದೆ. ಮೃತಳನ್ನು ಶಾಂತವನ(19) ಎಂದು ಗುರುತಿಸಲಾಗಿದೆ. ಈಕೆ ಇರಿಂಜಲಕುಡ ನಿವಾಸಿಯಾಗಿದ್ದು, ಕೊಡುಂಗಲ್ಲೂರಿನ ಕೆಕೆಟಿಎಂ ಕಾಲೇಜು ವಿದ್ಯಾರ್ಥಿನಿ.


ಜ್ಯೋತಿ ಪ್ರಕಾಶ್ ಮತ್ತು ರಜಿತಾ ದಂಪತಿ ಪುತ್ರಿ ಶಾಂತವನ ಮನೆಯ ಆವರಣದಲ್ಲಿರುವ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು . ಆಕೆಯ ಮೃತದೇಹವನ್ನು ಇರಿಂಜಲಕುಡದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಈ ಸಂಬಂಧ ಕಟ್ಟೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಘಟನೆ ನಡೆದಾಗ ಆಕೆಯ ಪಾಲಕರು ಮನೆಯಲ್ಲಿ ಇರಲಿಲ್ಲ. ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತ್ರಿಸ್ಸೂರ್ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಲಾಗಿದೆ.

Advertisement
Click to comment

You must be logged in to post a comment Login

Leave a Reply